ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ, ಕಲ್ಲುರ್ಟಿ ದೈವದ ನೇಮೋತ್ಸವದ ಬಳಿಕ ಕಲ್ಲೇಗ ದೈವಸ್ಥಾನದ ಭಂಡಾರದ ಮನೆಯಾದ ಕಾರ್ಜಾಲು ಗುತ್ತುವಿನಲ್ಲಿ ನಡೆಯುವ ಕಾರ್ಜಾಲು ಶ್ರೀ ಧೂಮಾವತಿ ದೈವದ ದೊಂಪದ ಬಲಿ ಜಾತ್ರೋತ್ಸವ ಆಮಂತ್ರಣ ಪತ್ರವನ್ನು ಫೆ.21 ರಂದು ಸಂಜೆ ಪುತ್ತೂರು ಪೇಟೆಯಲ್ಲಿ ವಿತರಿಸಲಾಯಿತು.
ಫೆ.24 ರಂದು ಜಾತ್ರೋತ್ಸವ ನಡೆಯಲಿದ್ದು, ಅಂದು ರಾತ್ರಿ ಗಂ.9.30 ಕ್ಕೆ ಕಾರ್ಜಾಲು ಗುತ್ತಿನಿಂದ ಧೂಮಾವತಿ, ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಭಂಡಾರ ಹೊರಡಲಿದೆ.
ರಾತ್ರಿ ಗಂಟೆ 10 ಕ್ಕೆ ಗೋಂದಳ ಪೂಜೆ ನಡೆಯಲಿದೆ.ರಾತ್ರಿ ಗಂ.11.45 ಕ್ಕೆ ಗ್ರಾಮದೈವ ಧೂಮಾವತಿ, ಕಲ್ಕುಡ, ಕಲ್ಲುರ್ಟಿ ಮತ್ತು ಇತರ ದೈವಗಳ ದೊಂಪದ ಬಲಿ ನೇಮೋತ್ಸವ ನಡೆಯಲಿದೆ.
ಇದರ ಅಂಗವಾಗಿ ಫೆ.21 ರಂದು ಪುತ್ತೂರು ಪೇಟೆಯಲ್ಲಿ ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಿಂದ ವಿತರಣೆ ಮಾಡಲಾಯಿತು. ದೊಂಪದ ಬಲಿ ಉತ್ಸವ ಸಮಿತಿ ಅಧ್ಯಕ್ಷರಾಗಿರುವ ನಗರಸಭಾ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್,ನಗರಸಭಾ ಸದಸ್ಯ ದಿನೇಶ್ ಗೌಡ ಶೇವಿರೆ, ಕಾರ್ಜಾಲು ಗುತ್ತು ಮನೆತನದ ಯಜಮಾನ ಅಜಿತ್ ಕುಮಾರ್ ಜೈನ್, ಕಲ್ಲೇಗ ದೈವಸ್ಥಾನದ ಮಾಜಿ ಸದಸ್ಯ ರವಿಕಿರಣ್ ನೆಲಪ್ಪಾಲು, ಮಾದವ ಪಟ್ಲ, ಜಗನ್ನಾಥ ನೆಲಪ್ಪಾಲು, ದೇವಪ್ಪ ದಾಸಯ್ಯ, ದಿವಾಕರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.