ಜನತೆಯ ಮನವೊಲಿಸಿ, ಅತ್ಯಧಿಕವಾಗಿ ಭಾಗವಹಿಸಲು ನಾವೂ ಪ್ರಯತ್ನಿಸುತ್ತೇವೆ – ಉಚಿತ ಫೂಟ್ ಪಲ್ಸ್ ಶಿಬಿರದಲ್ಲಿ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಎನ್

0

ಪುತ್ತೂರು : ಉಚಿತ ಫೂಟ್ ಪಲ್ಸ್ ಥೆರಪಿಯೊಂದು ಉತ್ತಮ ಕಾರ್ಯಕ್ರಮ. ಈ ಥೆರಪಿ ಬಗ್ಗೆ ನನಗೂ ಕೂಡ ಮಾಹಿತಿ ಇರಲಿಲ್ಲ. ಆದರೆ ಈಗ ಮಾಹಿತಿ ಸಿಕ್ಕಿದ್ದು, ಬಿಪಿ, ತಲೆನೋವು ಸಮಸ್ಯೆಯಿಂದ ನಾನೂ ಬಳಲುತ್ತಿದ್ದು , ಇದೀಗ ಥೆರಪಿ ಮೂಲಕ ಕೊಂಚ ಆರಾಮವೆನಿಸಿದೆ. ಮೆಡಿಸಿನ್ ಸೇವನೆಯ ದುಷ್ಪರಿಣಾಮ ಹಾಗೂ ಈ ಥೆರಿಯ ಮಹತ್ವವೇನು ಎಂಬುದು ಆಯೋಜಕರಿಂದ ತಿಳಿದಿದೆ.
ಆದರಿಂದ ಈ ಶಿಬಿರಕ್ಕೆ ಗ್ರಾಮದ ಜನತೆ ಹೆಚ್ಚು ಸಂಖ್ಯೆಯಲ್ಲಿ ಬರುವಂತೆ ಅವರ ಮನವೊಲಿಸಿ ಪ್ರಯತ್ನ ಮಾಡೋಣವೆಂದು ಬನ್ನೂರು ಗ್ರಾ.ಪಂ. ಅಧ್ಯಕ್ಷೆ ಸ್ಮಿತಾ ಎನ್ ಅಭಿಪ್ರಾಯಪಟ್ಟರು.
ಫೆ.22 ರಿಂದ ಮಾ.7 ತನಕ ಬನ್ನೂರು ಪಂಚಾಯತ್ ಸಭಾಂಗಣದಲ್ಲಿ, ಬನ್ನೂರು ಗ್ರಾ. ಪಂ ಹಾಗೂ ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಕಲ್ಲಾರೆ ಇದರ ಸಹಭಾಗಿತ್ವದಲ್ಲಿ ಪ್ರಾರಂಭಗೊಂಡ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬನ್ನೂರು ಪಂಚಾಯತ್ ಉಪಾಧ್ಯಕ್ಷ ಶೀನಪ್ಪ ಕುಲಾಲ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಿತ್ರಾವತಿ ವೇದಿಕೆಯಲ್ಲಿ ಹಾಜರಿದ್ದರು.
ಶಿಬಿರದ ಬಗ್ಗೆ ಪೂರ್ಣ ಮಾಹಿತಿಯನ್ನು ಕಲ್ಲಾರೆ ಕಂಪಾನಿಯೋ ನೆಮ್ಮದಿ ವೆಲ್ನೆಸಗ ಸೆಂಟರ್ ಮುಖ್ಯಸ್ಥರಾದ ಪ್ರಭಾಕರ್ ಸಾಲ್ಯಾನ್ ನೀಡಿದರು.
ಬಳಿಕ ಥೆರಪಿಯೂ ಆರಂಭಗೊಂಡಿತು. ಹಲವರು ಈ ಶಿಬಿರದಲ್ಲಿ ಪಾಲ್ಗೊಂಡು, ಥೆರಪಿ ಲಾಭ ಪಡೆದುಕೊಂಡರು.

LEAVE A REPLY

Please enter your comment!
Please enter your name here