ನಿಡ್ಪಳ್ಳಿ; ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿಯ ಎಂಟನೇ ತರಗತಿ ವಿದ್ಯಾರ್ಥಿ ಕೆ. ಹೇಮಂತ್ ಕುಮಾರ್ 2023 -24 ನೇ ಸಾಲಿನಲ್ಲಿ ವಿದ್ಯುತ್ ರಹಿತವಾದ ತೆಂಗಿನಕಾಯಿ ತುರಿಯುವ ಯಂತ್ರದ ಮಾದರಿಯನ್ನು ತಯಾರಿಸಿ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆ ಆಗಿರುತ್ತಾನೆ ಎಂದು ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ್ ತಿಳಿಸಿದ್ದಾರೆ.
ಈತ ಆನಾಜೆ ಕುದುರೆ ಕುಮೇರಿ ಗೋಪಾಲಕೃಷ್ಣ ಆಚಾರ್ಯ ಮತ್ತು ವಾರಿಜಾ ದಂಪತಿಗಳ ಸುಪುತ್ರ.ಇವನಿಗೆ ಇನ್ಸ್ಪ್ಯೈರ್ ಅವಾರ್ಡ್ ನೊಡೆಲ್ ಶಿಕ್ಷಕಿ ಮಂಜುಳ ಭಟ್ ಮಾರ್ಗದರ್ಶನ ನೀಡಿರುತ್ತಾರೆ.