ಶ್ರೀ ನರಸಿಂಹ ಮಠದ ಪುನರ್‌ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ-ಹೊರೆಕಾಣಿಕೆ ಸಮರ್ಪಣೆ

0

ನೆಲ್ಯಾಡಿ: ಬಜತ್ತೂರು ಗ್ರಾಮದ ಒಡ್ಯಮೆ ಸಮೀಪವಿರುವ ಕೂವೆಮಠ(ಶಿವತ್ತಮಠ) ಶ್ರೀ ನರಸಿಂಹ ಮಠದಲ್ಲಿ ನಾಲ್ಕು ದಿನ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವಕ್ಕೆ ಫೆ.23ರಂದು ಬೆಳಿಗ್ಗೆ ಚಾಲನೆ ದೊರೆತಿದ್ದು ಮೊದಲ ದಿನ ಗ್ರಾಮಸ್ಥರಿಂದ ಬೃಹತ್ ಹೊರೆಕಾಣಿಕೆ ಸಮರ್ಪಣೆಯಾಗಿದೆ.


ಬಜತ್ತೂರು, ಗೋಳಿತ್ತೊಟ್ಟು, ಆಲಂತಾಯ, ಹಳೆನೇರೆಂಕಿ, ರಾಮಕುಂಜ ಸೇರಿದಂತೆ ಶ್ರೀ ನರಸಿಂಹ ಮಠ ಪರಿಸರದ ಗ್ರಾಮಗಳ ಗ್ರಾಮಸ್ಥರು ಅಕ್ಕಿ, ಅಡಿಕೆ, ತೆಂಗು, ಸಿಯಾಳ ಸೇರಿದಂತೆ ವಿವಿಧ ವಸ್ತುಗಳನ್ನು ತಂದು ಹೊರೆಕಾಣಿಕೆಯಾಗಿ ದೇವರಿಗೆ ಸಮರ್ಪಿಸಿದರು. ಬೆಳಿಗ್ಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಹೊರೆಕಾಣಿಕೆ ವಾಹನಗಳನ್ನು ಕೂಡುರಸ್ತೆಯಲ್ಲಿ ಬರಮಾಡಿಕೊಳ್ಳಲಾಯಿತು. ಅಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಅವರು ತೆಂಗಿನಕಾಯಿ ಒಡೆದು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಹೊರೆಕಾಣಿಕೆ ವಾಹನಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಬಳಿಕ ಭಜನೆ, ಚೆಂಡೆ, ಕಲಶಹೊತ್ತ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀ ನರಸಿಂಹ ಮಠಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ಆಗಮಿಸಿತು. ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ನಾರಾಯಣ ಬಡೆಕಿಲ್ಲಾಯ ಅವರು ಹೊರೆಕಾಣಿಕೆಗೆ ಪೂಜೆ ಸಲ್ಲಿಸಿದರು. ಅತಿಥಿಯಾಗಿದ್ದ ಧನ್ಯಕುಮಾರ್ ರೈಯವರು ಶುಭಹಾರೈಸಿದರು. ಬಳಿಕ ಅರ್ಚಕರು ದೀಪ ಬೆಳಗಿಸಿ ಹಿಂಗಾರ ಅರಳಿಸಿ ಉಗ್ರಾಣ ಮುಹೂರ್ತ ನೆರವೇರಿಸಿದರು. ಹೊರೆಕಾಣಿಕೆಗಳನ್ನು ಉಗ್ರಾಣದಲ್ಲಿ ತುಂಬಿಸಲಾಯಿತು. ಬಳಿಕ ಉಪಾಹಾರ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.


ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಕಾರ್ಯಾಲಯ ಉದ್ಘಾಟಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಿಜಯ ಎಂ.ಶೆಟ್ಟಿ ಒಡ್ಯಮೆ ಎಸ್ಟೇಟ್, ಕಾರ್ಯಾಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು, ಉಪಾಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಮಹೇಂದ್ರವರ್ಮ ಮೇಲೂರುಪಟ್ಟೆ, ಪ್ರಧಾನ ಕಾರ್ಯದರ್ಶಿ ರಂಜಿತ್ ಜೈನ್ ಮೇಲೂರುಪಟ್ಟೆ, ಕಾರ್ಯದರ್ಶಿ ಚಂದ್ರಶೇಖರ ಶಿವತ್ತಮಠ, ಜೊತೆ ಕಾರ್ಯದರ್ಶಿಗಳಾದ ಮಹೇಶ್ ಪಾತೃಮಾಡಿ, ಆನಂದ ಮೇಲೂರು, ಕೋಶಾಧಿಕಾರಿ ಶಾಂತಿಪ್ರಕಾಶ್ ಬರ್ನಜಾಲು, ಸದಸ್ಯರಾದ ಅಣ್ಣು ಗೌಡ ಶಿವತ್ತಮಠ, ವೀರೇಂದ್ರ ಜೈನ್ ಮೇಲೂರು, ಶಾಂತಪ್ಪ ಗೌಡ ಮೇಲೂರು, ಜನಾರ್ದನ ಕದ್ರ, ಪ್ರಶಾಂತ್ ಆರ್.ಕೆ., ಶೇಖರ ಗೌಡ ಕಟ್ಟಪುಣಿ, ರಮೇಶ್ ರೈ ರಾಮಜಾಲು, ನಾರಾಯಣ ಶೆಟ್ಟಿ ಮೇಲೂರು, ಶಿವಣ್ಣ ಗೌಡ, ಪದ್ಮಯ್ಯ ಗೌಡ ಡೆಂಬಲೆ, ರಾಜೇಶ್ ಗೌಡ ಶಿವತ್ತಮಠ, ಲೋಕೇಶ್ ಗೌಡ ಬಜತ್ತೂರುಗುತ್ತು, ಓಬಯ್ಯ ಪರವ ಮೇಲೂರು, ಸುರೇಶ್ ಬಿದಿರಾಡಿ ಸೇರಿದಂತೆ ವಿವಿಧ ಸಮಿತಿಗಳ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here