ಹಿರೇಬಂಡಾಡಿ ದೇವಸ್ಥಾನದ ವಾರ್ಷಿಕ ಉತ್ಸವ, ಶ್ರೀ ದೈವಗಳ ಪುನಃಪ್ರತಿಷ್ಠೆ, ಬ್ರಹ್ಮಕಲಶ-ಹೊರೆಕಾಣಿಕೆ ಸಮರ್ಪಣೆ

0

ಹಿರೇಬಂಡಾಡಿ: ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಾರ್ಷಿಕ ಉತ್ಸವ ಮತ್ತು ಶ್ರೀ ದೈವಗಳ ಪುನಃಪ್ರತಿಷ್ಠೆ, ಬ್ರಹ್ಮಕಲಶ ಪ್ರಯುಕ್ತ ಫೆ.25ರಂದು ಬೆಳಿಗ್ಗೆ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.


ಹಿರೇಬಂಡಾಡಿಯ ಪಾಲೆತ್ತಡಿಯಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆಯೂ ದೇವಸ್ಥಾನಕ್ಕೆ ಆಗಮಿಸಿತು. ಭಜನಾ ತಂಡಗಳು ಹೊರೆಕಾಣಿಕೆ ಮೆರವಣಿಗೆಗೆ ಮೆರುಗು ನೀಡಿತು.

ಮೆರವಣಿಗೆಯಲ್ಲಿ ದೈವಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಧಾನ ಅರ್ಚಕರೂ ಆದ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ವ್ಯವಸ್ಥಾಪಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಸಾಂತಿತ್ತಡ್ಡ, ಸದಸ್ಯರಾದ ಗಣೇಶ ಮಠಂದೂರು, ಸದಾಶಿವ ಬಂಗೇರ ಎಲಿಯ, ನಾರಾಯಣ ಕನ್ಯಾನ, ಮುದ್ದ ಕೆಮ್ಮಾರ, ಸತೀಶ ಶೆಟ್ಟಿ ಪಡ್ಯೊಟ್ಟು, ಕಸ್ತೂರಿ ಹೆನ್ನಾಳ, ಭಾರತಿ ನಿಡ್ಡೆಂಕಿ, ಉತ್ಸವ ಸಮಿತಿ ಅಧ್ಯಕ್ಷ ನವೀನ್ ಪಡ್ಪು, ಕಾರ್ಯದರ್ಶಿ ಅಶೋಕ ಹಲಸಿನಕಟ್ಟೆ, ಶ್ರೀ ದೈವಗಳ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಿಶ್ವನಾಥ ಕೆಮ್ಮಟೆ, ಕೋಶಾಧಿಕಾರಿ ವಿಠಲ ಪರಕೊಡಂಗೆ, ಬೈಲುವಾರು ಸಂಚಾಲಕರು, ವಿವಿಧ ಸಮಿತಿಯ ಸದಸ್ಯರು, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ, ಗಣೇಶೋತ್ಸವ ಸಮಿತಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here