ಪುತ್ತೂರು: ಪುತ್ತೂರು ಬ್ರಹ್ಮಶ್ರೀ ವಿವಿದೋದ್ಧೇಶ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳ ಪೈಕಿ 10 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಸಾಮಾನ್ಯ ಸ್ಥಾನದಿಂದ ಸರ್ವೆ ಗ್ರಾಮದ ಆನಂದ ಸದನ ನಿವಾಸಿ ಕೆ.ಆನಂದ ಪೂಜಾರಿ ಸರ್ವೆದೋಳ, ಒಳಮೊಗ್ರು ಗ್ರಾಮದ ಬರೆಮೇಲು ನಿವಾಸಿ ಉಮೇಶ್ ಕುಮಾರ್ ಬರೆಮೇಲು, ನೈತಾಡಿ ಅಕ್ಷಯ ಫಾರ್ಮ್‌ನ ಜಯಂತ ನಡುಬೈಲು ಯನ್, ಆರ್ಯಾಪು ಗ್ರಾಮದ ಅಪೂರ್ವ ಲೇಔಟ್ ನಿವಾಸಿ ಕೆ.ಪಿ.ದಿವಾಕರ್, ಶಾಂತಿಗೋಡು ಗ್ರಾಮದ ಕಲ್ಕಾರ್ ನಿವಾಸಿ ರವೀಂದ್ರ ಕಲ್ಕಾರ್, ಚಾರ್ವಾಕ ಗ್ರಾಮದ ಕುಮಾರಧಾರ ಫಾರ್ಮ್ಸ್‌ನ ವಿಜಯಕುಮಾರ್ ಎಸ್. ಸೊರಕೆ, ಕುದ್ಮಾರು ಗ್ರಾಮದ ಕೆಡೆಂಜಿಗುತ್ತು ನಿವಾಸಿ ಎ.ಸತೀಶ್ ಕುಮಾರ್ ಕೆಡೆಂಜಿ ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ಸ್ಥಾನದಿಂದ ನೆಲ್ಯಾಡಿ ಕೌಕ್ರಾಡಿ ಗ್ರಾಮದ ಕುಂಡಡ್ಕ ನಿವಾಸಿ ಉಷಾ ಕೆ.ಅಂಚನ್, ಕೆದಂಬಾಡಿ ಗ್ರಾಮದ ಬಾರಿಕೆ ನಿವಾಸಿ ಬೇಬಿರವರು ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಎ. ಸ್ಥಾನದಿಂದ ಕೆದಂಬಾಡಿ ಗ್ರಾಮದ ಕುರಿಕ್ಕಾರು ನಿವಾಸಿ ಕೆ.ನಾರಾಯಣ ಪೂಜಾರಿ ಕುರಿಕ್ಕಾರರವರು ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಬಿ., ಪ.ಜಾತಿ ಹಾಗೂ ಪ.ಪಂಗಡ ಸ್ಥಾನದಿಂದ ಯಾವುದೇ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ. ಪುತ್ತೂರು ಸಹಕಾರ ಸಂಘಗಳ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಶ್ಮಿತಾ ಡಿ, ಸಿಬ್ಬಂದಿ ಅಕ್ಷಿತಾ ಸಹಕರಿಸಿದರು.