ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಮದಾಯದವರ ಅಸ್ತಿತ್ವವಿರಬೇಕು: ಸೌಂದರ್ಯ ಮಂಜಪ್ಪ
ಸಮುದಾಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡೋಣ: ಮಯೂರ್ ಉಳ್ಳಾಲ
ವಿಟ್ಲ: ಸಮುದಾಯದವರು ಆಡಳಿತಾತ್ಮಕ ಹುದ್ದೆಗೇರಬೇಕು. ದೇಗುಲ, ವಿದ್ಯಾ ಸಂಸ್ಥೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಮುದಾಯ ಅಸ್ತಿತ್ವವಿರಬೇಕು. ರಾಜಕೀಯವಾಗಿಯೂ ಶಕ್ತಿ ಪ್ರದರ್ಶನವಾಗಬೇಕು. ಆಗ ಮಾತ್ರ ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ. ವಿಟ್ಲದಲ್ಲಿ ಸಮದಾಯದವರೆಲ್ಲಾ ಒಟ್ಟು ಸೇರಿ ಮಾಡಿದ ಕೆಲಸ ಅಭಿನಂದನೀಯ ಎಂದು ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಸೌಂದರ್ಯ ಮಂಜಪ್ಪ ಪಿ. ರವರು ಹೇಳಿದರು.
ಅವರು ಫೆ.25ರಂದು ವಿಟ್ಲ ಕುಲಾಲ ಸಂಘದ ಆಶ್ರಯದಲ್ಲಿ ನಡೆದ ನೂತನ ಸಭಾಭವನ, ”ಕುಲಾಲ ರಜತ ಭವನದ ಉದ್ಘಾಟನೆ, ಬೆಳ್ಳಿಹಬ್ಬ ಮಹೋತ್ಸವ ಹಾಗೂ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಅಂಗವಾಗಿ ಏರ್ಪಡಿಸಿದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲರವರು ಮಾತನಾಡಿ, ಬಡ ಹೆಣ್ಣುಮಕ್ಕಳಿಗೆ ಉಚಿತ ಸೌಲಭ್ಯದಲ್ಲಿ ವಸತಿ ನಿಲಯವನ್ನು ಮಂಗಳೂರಿನಲ್ಲಿ ಎರಡು ವರ್ಷದೊಳಗೆ ನಿರ್ಮಿಸಲಾಗುವುದು. ಸಮುದಾಯದ ದೇಗುಲ ನಿರ್ಮಾಣವಾಗಿದ್ದು, ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಆಶಯವಿದೆ. ಸಮುದಾಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡೋಣ. ಜಿಲ್ಲೆಯಲ್ಲಿ 1 ಲಕ್ಷ ಕುಲಾಲ ಮತದಾರರಿದ್ದಾರೆ ಎಂದರು.
ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಿ. ಕೆ. ಬಾಬುರವರು ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದರು. ವಾಂತಿಚ್ಚಾಲ್ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಬೆಂಗಳೂರು ತುಳುವೆರೆ ಚಾವಡಿ ಮಾಜಿ ಅಧ್ಯಕ್ಷ ಪುರುಷೋತ್ತಮ ಚೇಂಡ್ಲಾ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ವಿಟ್ಠಲ ಕನ್ನೀರ್ತೋಟ, ಬೆಂಗಳೂರು ಅಮೂಲ್ಯ ರಬ್ಬರ್ಸ್ನ ದಿವಾಕರ ಮೂಲ್ಯ, ಚಲನಚಿತ್ರ ನಟ ಭಗತ್ವಿಕ್ರಾಂತ್, ಮಂಗಳೂರು ಮಹಾನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ವಿಟ್ಲ ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ಸುಚಿತ್ರಾ ರಮಾನಾಥ ವಿಟ್ಲ, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಕಾರ್ಯದರ್ಶಿ ಸದಾಶಿವ ಕೆ., ಪ್ರಗತಿಪರ ಕೃಷಿಕ ಭಾಸ್ಕರ ಕಟ್ಟೆ ವಿಟ್ಲ, ಪ್ರಗತಿಪರ ಕೃಷಿಕ ಲೋಕಯ್ಯ ಮೂಲ್ಯ ಚಂದಪ್ಪಾಡಿ, ವಿಟ್ಲ ಕುಲಾ ಸಂಘದ ಮಾಜಿ ಅಧ್ಯಕ್ಷರಾದ ವೀರಪ್ಪ ಮೂಲ್ಯ ಪುಣಚ, ವಸಂತ ಕುಲಾಲ್ ಎರುಂಬು, ನಾರಾಯಣ ಮೂಲ್ಯ ಪೆತ್ತಮುಗೇರು, ವಿಶ್ವನಾಥ ಕುಲಾಲ್ ಕೋಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಆರ್.ಕೆ.ಪೃಥ್ವಿರಾಜ್, ಡಾ.ಜಯಪ್ರಕಾಶ್ ಕೊಡಿಂಜೆ, ಸದಾಶಿವ ವೇಣೂರು, ರಾಮ ಕುಲಾಲ್ ಸಾಯ ರವರನ್ನು ಸಮ್ಮಾನಿಸಲಾಯಿತು. ಪದಾಧಿಕಾರಿಗಳನ್ನು ಮತ್ತು ಸ್ವಯಂ ಸೇವಕರನ್ನು ಗೌರವಿಸಲಾಯಿತು.
ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ರಮಾನಾಥ ವಿಟ್ಲ ಸ್ವಾಗತಿಸಿ, ಉಪಾಧ್ಯಕ್ಷ ರಾಧಾಕೃಷ್ಣ ಎರುಂಬು ವಂದಿಸಿದರು. ನವೀನ್ ಕುಲಾಲ್ ಪುತ್ತೂರು, ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಭಜನೆ, ಸ್ವಜಾತಿ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತೂಯಿಲೆಕ ಅತ್ತ್ ನಾಟಕ ಪ್ರದರ್ಶನ ನಡೆಯಿತು.