ಪುತ್ತೂರು: ಪುತ್ತೂರು ಮೂಲದ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ಅವರ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಳ್ಳಾಲ ಠಾಣೆಗೆ ತೆರಳಿ ಠಾಣಾಧಿಕಾರಿಯವರಲ್ಲಿ ಮಾತುಕತೆ ನಡೆಸಿದರು.
ಎಂಎಸ್ಸಿ ಮಾಡಿದ್ದ ಚೈತ್ರಾ ಹೆಬ್ಬಾರ್ ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಮಾಡುತ್ತಿದ್ದು ಆಕೆಯನ್ನು ಗಾಂಜಾ ಪ್ರಕರಣದ ಆರೋಪಿಯಾಗಿದ್ದ ಡ್ರಗ್ಸ್ ಪೆಡ್ಲರ್ ಶಾರೂಕ್ ಶೇಕ್ ಎಂಬಾತ ಡ್ರಗ್ಸ್ ಹಾಗೂ ಇನ್ನಿತರ ಮೋಸದಾಟವಾಡಿ ಆಕೆಯನ್ನು ಅಪರಿಹರಿಸಿದ್ದಾರೆ. ಈ ಕುರಿತು ಆಕೆಯನ್ನು ಪತ್ತೆ ಮಾಡಬೇಕೆಂದು ಅವರು ಠಾಣಾಧಿಕಾರಿಗೆ ಮನವಿ ಮಾಡಿದರು.
ಕೋಟೆಕಾರು ಬಳಿಯ ಮಾಡೂರಿನಲ್ಲಿ ಪಿಜಿ ಒಂದರಲ್ಲಿದ್ದ ಯುವತಿಯನ್ನು ಫೆ.17ರಂದು ರೈಲಿನಲ್ಲಿ ಆರೋಪಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ಇಲಾಖೆ ತೀವ್ರ ತನಿಖೆ ನಡೆಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಆಕೆಯನ್ನು ಕರೆತರಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ ಎಂದು ಪುತ್ತಿಲ ಪರಿವಾರದ ಪ್ರಕಟಣೆ ತಿಳಿಸಿದೆ. ಈ ಸಂದರ್ಭ ಉಳ್ಳಾಲದ ಹಿಂದೂ ಸಂಘಠನೆಯ ಮುಖಂಡ ಅರುಣ್ ಉಳ್ಳಾಲ, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.