ಉಪ್ಪಿನಂಗಡಿ: ಬಾಲ್ಯೊಟ್ಟುಗುತ್ತು ಕರುಣಾಕರ ರೈ ಅವರು ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರಿಗೂ ಚಿರಪರಿಚಿತ ವ್ಯಕ್ತಿಯಾಗಿದ್ದು, ಜಾತ್ಯಾತೀತವಾಗಿ ಎಲ್ಲರನ್ನೂ ಪ್ರೀತಿಸುವ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದರು.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ನೇತ್ರಾವತಿ ಸಮುದಾಯ ಭವನದಲ್ಲಿ ಫೆ.27ರಂದು ನಡೆದ ಮೃತರ ವೈಕುಂಠ ಸಮಾರಾಧನೆಯಲ್ಲಿ ಅವರು ನುಡಿ ನಮನ ಸಲ್ಲಿಸಿ, ಮಾತನಾಡಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುಗುತ್ತು ಮಾತನಾಡಿ, ಕರುಣಾಕರ ರೈಯವರು ಈ ಸಮಾಜದ ವ್ಯಕ್ತಿಯಲ್ಲ. ಓರ್ವ ಶಕ್ತಿಯಾಗಿದ್ದವರು. ಬಾಲ್ಯೊಟ್ಟುಗುತ್ತುವಿನ ಪುಣ್ಯ ಮಣ್ಣಿನಲ್ಲಿ ಹುಟ್ಟಿ ತನ್ನ ಉದ್ಯೋಗದೊಂದಿಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ದಿ. ಚಿದಾನಂದ ಕಾಮತ್ ಅಗಲಿಕೆಯ ನಂತರ ಅವರ ‘ಬಾರಿಸು ಕನ್ನಡ ಡಿಂಡಿಮವ’ ತಂಡವನ್ನು ಮುನ್ನಡೆಸುವ ಮೂಲಕ ಅದೆಷ್ಟೋ ಪ್ರತಿಭೆಗಳಿಗೆ ಬೆಳೆಯಲು ನಿರಂತರ ಪ್ರೋತ್ಸಾಹ ನೀಡಿದವರು. ತನ್ನ ಮಗನನ್ನು ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧಕನನ್ನಾಗಿ ಮಾಡಬೇಕೆಂದು ಕನಸು ಕಂಡ ಅವರು ಅದಕ್ಕಾಗಿ ನಿರಂತರ ಪಣ ತೊಟ್ಟವರು. ಇದರಿಂದಾಗಿ ಅವರ ಪುತ್ರ ಈಗ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಶಿಷ್ಯನಾಗಿ ಬೆಳೆಯುವಂತಾಗಿದೆ. ಎಲ್ಲರನ್ನೂ ಪ್ರೀತಿಸುತ್ತಿದ್ದ ಇವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.ಉದ್ಯಮಿ ರವಿ ಶೆಟ್ಟಿ ಕತಾರ್ ಮಾತನಾಡಿ ತನ್ನ ಹಾಗೂ ಕರುಣಾಕರ ರೈಯವರ ಒಡನಾಟ ನೆನಪಿಸಿಕೊಂಡರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಅಬ್ರಾಹಂ ವರ್ಗೀಸ್, ಗೋವಿಂದ ಭಟ್ ಉಪ್ಪಿನಂಗಡಿ, ಬನಾರಿ ಶಂಕರನಾರಾಯಣ ಭಟ್, ಡಾ. ರಾಜಾರಾಮ್ ಕೆ.ಬಿ., ಎಂ.ಬಿ. ವಿಶ್ವನಾಥ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಚಂದ್ರಹಾಸ ರೈ, ಡಾ. ಎಸ್.ಪಿ. ರೈ ಮಂಗಳೂರು, ಉಮೇಶ್ ಶೆಣೈ, ರಾಮಚಂದ್ರ ಮಣಿಯಾಣಿ, ರೂಪೇಶ್ ರೈ ಅಲಿಮಾರ್, ರವೀಂದ್ರ ದರ್ಬೆ, ಡಾ. ಶೌರಿ ರೈ, ಸಂಕಪ್ಪ ಶೆಟ್ಟಿ ಕೋಡಿಂಬಾಡಿ, ನಿರಂಜನ ರೈ ಮಠಂತಬೆಟ್ಟು, ವಿಕ್ರಂ ಶೆಟ್ಟಿ ಅಂತರ, ಮುರಳೀಧರ ರೈ ಮಠಂತಬೆಟ್ಟು, ದೇರಣ್ಣ ರೈ ಬೈಲಾಡಿ, ಬಾಳಪ್ಪ ರೈ ಬಾಲ್ಯೊಟ್ಟುಗುತ್ತು, ಭಾಸ್ಕರ ಕೋಡಿಂಬಾಳ, ಜಗನ್ನಾಥ ರೈ ನಡುಮನೆ, ಜಗನ್ನಾಥ ಶೆಟ್ಟಿ ಬಾಲ್ಯೊಟ್ಟುಗುತ್ತು, ಧನಂಜಯ ರೈ ಬಾಲ್ಯೊಟ್ಟುಗುತ್ತು, ಜಯರಾಮ ರೈ ಬಾಲ್ಯೊಟ್ಟುಗುತ್ತು, ಉಮೇಶ್ ರೈ ಬಾಲ್ಯೊಟ್ಟುಗುತ್ತು, ಮೃತರ ಪತ್ನಿ ನಿರತ ರೈ, ಪುತ್ರಿ ನಿರೀಕ್ಷಾ ರೈ, ಪುತ್ರ ನಿಶಾನ್ ರೈ ಮತ್ತಿತರರು ಉಪಸ್ಥಿತರಿದ್ದು, ಮೃತರ ಆತ್ಮಕ್ಕೆ ಸದ್ಗತಿ ಕೋರಿದರು.