ಚರ್ಮರೋಗ,ಲೈಂಗಿಕ ರೋಗ ಹಾಗೂ ಸೌಂದರ್ಯ ಚಿಕಿತ್ಸಾ ತಜ್ಞ ಡಾ.ಸೂರ್ಯ ಮಲ್ಯ ಉಷಾ ಪಾಲಿ ಕ್ಲಿನಿಕ್ ನಲ್ಲಿ ಸೇವೆಗೆ ಲಭ್ಯ

0

ಪುತ್ತೂರು: ಚರ್ಮರೋಗ, ಲೈಂಗಿಕ ರೋಗ ಹಾಗೂ ಸೌಂದರ್ಯ ವರ್ಧಕ ಚಿಕಿತ್ಸಾ ತಜ್ಞರಾದ ಡಾ.ಸೂರ್ಯ ಮಲ್ಯ ಕೆ ಅವರು ಮಾ.3ರಿಂದ ಪ್ರತಿ ಆದಿತ್ಯವಾರ ಬೆಳಗ್ಗೆ 11ರಿಂದ 1ತನಕ ಉಷಾ ಪಾಲಿ ಕ್ಲಿನಿಕ್ ನಲ್ಲಿ ಸೇವೆಗೆ ಲಭ್ಯ.

ಕಾಸರಗೋಡಿನ ಪ್ರತಿಷ್ಠಿತ ಮಲ್ಯ ಸಿಟಿ ಆಸ್ಪತ್ರೆಯ ಮಾಲಕರಾದ ಖ್ಯಾತ ಕೀಲು ಮತ್ತು ಎಲುಬು ರೋಗ ತಜ್ಞ ಡಾ. ಸುರೇಶ್ ಮಲ್ಯ ಹಾಗೂ ಸ್ತ್ರೀ ರೋಗ ಮತ್ತು ಹೆರಿಗೆ ತಜ್ಞರಾದ ಡಾ.ಮಾಯಾ ಮಲ್ಯ ದಂಪತಿಗಳ ಸುಪುತ್ರನಾದ ಇವರು ಕಾಸರಗೋಡಿನ ಖ್ಯಾತ ವಕೀಲರಾದ ದಾಮೋದರ ಮಲ್ಯ ಹಾಗೂ ಗೀತಾ ಮಲ್ಯ ಅವರ ಹಾಗೂ ಮೈಸೂರಿನ ಗಣೇಶ್ ಬೀಡಿ ಪಾಲುದಾರರಾದ ವಿನೋದ್ ರಾವ್ ಹಾಗೂ ಜಯಂತಿ ಅವರ ಮೊಮ್ಮಗನಾಗಿದ್ದಾರೆ.

ಇವರು ತಮ್ಮ ಎಂ.ಬಿ.ಬಿ.ಎಸ್,ಪದವಿಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಯೂನಿವರ್ಸಿಟಿ ಪೂರೈಸಿ ಬಳಿಕ ನಿಟ್ಟೆಯ ಕೆ. ಎಸ್ ಹೆಗ್ಡೆ ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ, ಲೈಂಗಿಕ ರೋಗ ಹಾಗೂ ಕುಷ್ಟರೋಗ ವಿಷಯದಲ್ಲಿ ಎಂ.ಡಿ ಪದವಿಯನ್ನು ಪಡೆದಿರುತ್ತಾರೆ. ಮಾತ್ರವಲ್ಲದೇ ಎಂ.ಬಿ.ಬಿ.ಎಸ್ ಅಧ್ಯಯನ ಮಾಡುವ ಸಮಯದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎಂಬ ಪ್ರಶಸ್ತಿಗೂ ಪಾತ್ರರಾಗಿದ್ದರು.

ಡಾ.ಸೂರ್ಯ ಮಲ್ಯ, ಚರ್ಮರೋಗ ಸಂಬಂಧಿ ಸಮಸ್ಯೆಗಳಾದ ಕೂದಲು ಉದುರುವಿಕೆ, ಫಂಗಲ್ ಇನ್ಫೆಕ್ಷನ್, ಕಜ್ಜಿ, ಉರಿ ಕಜ್ಜಿ, ಸರ್ಪ ಸುತ್ತು, ಕಾಲಿನ ಆಣಿ , ದಡಿಕೆ, ತುರಿಕೆ, ಅಲರ್ಜಿ, ಲೇಸರ್ ಚಿಕಿತ್ಸೆ, ಉಗುರಿನ ಶಸ್ತ್ರಚಿಕಿತ್ಸೆ, ಬೊಜ್ಜು ಕರಗಿಸುವ, ಮೊಡವೆ, ಮುಖದ ಕಲೆ,ಕುಷ್ಠ ರೋಗ ಇತ್ಯಾದಿ ಸಮಸ್ಯೆಗಳ ತಜ್ಞ ವೈದ್ಯರಾಗಿದ್ದು, ಮಾತ್ರವಲ್ಲದೆ ಮದುಮಗ ಹಾಗೂ ಮದುಮಗಳ ಮುಖದ ಕಾಂತಿ ವರ್ಧನ ಚಿಕಿತ್ಸೆ , ಕಣ್ಣಿನ ಹುಬ್ಬುಗಳ ಸೌಂದರ್ಯ ವರ್ಧನೆ, ಮುಖದ ಕಾಂತಿ ಹೆಚ್ಚಿಸುವ ಹಾಗೂ ಸೌಂದರ್ಯ ವರ್ಧಕ ಚಿಕಿತ್ಸಾ ತಜ್ಞರಾಗಿದ್ದಾರೆ. ಅಪಾಯ್ಮೆಂಟ್ಗಾಗಿ 9008256005
ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here