ಪುತ್ತೂರು: ಪುತ್ತೂರು ಮಂಗಳೂರು ಮತ್ತು ಹಾಸನ ಸಕ್ಲೇಶ್ ಪುರಕ್ಕೆ ವಿದ್ಯುತ್ ಚಾಲಿತ ರೈಲಿನ ಪರೀಕ್ಷಾರ್ಥ ಚಾಲನೆ ಬಳಿಕ ಪುತ್ತೂರು ಸುಬ್ರಹ್ಮಣ್ಯದ ಪರೀಕ್ಷಾರ್ಥ ವಿದ್ಯುತ್ ಚಾಲಿತ ರೈಲಿಗೂ ಫೆ.28ರಂದು ಚಾಲನೆ ದೊರಕಿದೆ.
ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೇಯ ಪ್ರಿನ್ಸಿಪಾಲ್ ಚೀಫ್ ಇಲೆಕ್ಟ್ರೀಕಲ್ ಇಂಜಿನಿಯರ್ ಇಸಾಕ್ ಖಾನ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಪರೀಕ್ಷಾರ್ಥ ವಿದ್ಯುತ್ ರೈಲಿಗೆ ಚಾಲನೆ ನೀಡಿದರು.
ರೈಲ್ವೇ ಎ ಡಿ ಆರ್ ಎಮ್ ವಿಜಯಲಕ್ಷ್ಮೀ, ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಕಬಕ ಪುತ್ತೂರು ರೈಲ್ವೇ ನಿಲ್ದಾಣ ಅಧೀಕ್ಷಕ ಎನ್ ರಾಹುಲ್ ಸಹಿತ ಪುತ್ತೂರು ರೈಲು ನಿಲ್ದಾಣದ ಸಿಬ್ಬಂದಿಗಳು ಉಪಸ್ಥಿತರಿದ್ದರು.