ಮಾ.1,2: ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರಾಮಹೋತ್ಸವ,ನವೀಕೃತ ರಂಗ ಮಂಟಪ ಉದ್ಘಾಟನೆ

0

ಪುತ್ತೂರು: ಮುಂಡೂರು ಗ್ರಾಮದವರ ನಂಬಿಕೆಯಂತೆ ಮತ್ತು ಕೆದಂಬಾಡಿ ಗ್ರಾಮಕ್ಕೆ ಗ್ರಾಮ ದೇವರಾಗಿರುವ ಅಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಾ.1 ಮತ್ತು 2 ರಂದು ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರಾಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಗಳ ನೇತೃತ್ವದಲ್ಲಿ ನಡೆಯಲಿರುವುದು. ಇದೇ ಸಂದರ್ಭ ನವೀಕೃತ ರಂಗ ಮಂಟಪ ಉದ್ಘಾಟನೆಗೊಳ್ಳಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಹಲವು ವರ್ಷಗಳ ಇತಿಹಾಸ ಇರುವ ಆಲಡ್ಕ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದ ಬಳಿಕ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಈ ದೇವಸ್ಥಾನ ಎರಡು ಗ್ರಾಮಗಳಿಗೆ ಸೇರುತ್ತಿರುವುದರಿಂದ ಮುಂಡೂರು ಗ್ರಾಮದ ಮಂದಿಗೆ ನಂಬಿಕೆಯಾದರದಲ್ಲಿ ಮತ್ತು ಕೆದಂಬಾಡಿ ಗ್ರಾಮಕ್ಕೆ ಗ್ರಾಮ ದೇವಸ್ಥಾನವಾಗಿದೆ. ಕಳೆದ ಬಾರಿ ಆಗಿನ ಶಾಸಕರಾದ ಸಂಜೀವ ಮಠಂದೂರು ಅವರಿಂದ ರೂ. 70 ಲಕ್ಷದ ಅನುದಾನದಲ್ಲಿ ತಡೆಗೋಡೆ, ಮೇಲ್ಛಾವಣಿ ಇಂಟರಲಾಕ್ ಕೆಲಸ ಆಗಿತ್ತು. ಬ್ರಹ್ಮಕಲಶೋತ್ಸವದ ಉಳಿಕೆ ಮೊತ್ತದಲ್ಲಿ ರಂಗಮಂಟಪದ ನಿರ್ಮಾಣ ಕೆಲಸ ಮಾಡಲಾಗಿತ್ತು. ಈಗಿನ ಶಾಸಕರಾಗಿರುವ ಅಶೋಕ್ ಕುಮಾರ್ ರೈ ಅವರು ದೇವಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿದ್ದಾರೆ. ಇದೀಗ ಮಾ.1ರಂದು ಪ್ರತಿಷ್ಟಾ ವಾರ್ಷಿಕೋತ್ಸವ ನಡೆಯಲಿದೆ. ಅದೇ ದಿನ ಸಂಜೆ ಗಂಟೆ 7ಕ್ಕೆ ನವೀಕೃತ ರಂಗಮಂಟಪ ಉದ್ಘಾಟನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ನವೀಕೃತ ರಂಗಮಂಟಪ ಉದ್ಘಾಟಸಲಿದ್ಧಾರೆ.

ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ತುಳು ನಾಟಕ ಪ್ರದರ್ಶನ ನಡೆಯಲಿದೆ. ಮಾ.2ಕ್ಕೆ ಶ್ರೀ ದೇವರ ಜಾತ್ರೋತ್ಸವ ನಡೆಯಲಿದೆ. ರಾತ್ರಿ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಶ್ರೀ ಸದಾಶಿವ ದೇವಸ್ಥಾನ ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶೀನಪ್ಪ ರೈ ಕೊಡಂಕೀರಿ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಆಳ್ವ ಬೋಳೋಡಿ, ನಿಕಟಪೂರ್ವ ಸದಸ್ಯರಾದ ವಿಶ್ವನಾಥ ರೈ ಕುಕ್ಕುಂಜೋಡು, ಭಾಸ್ಕರ ರೈ ಕೆದಂಬಾಡಿಗುತ್ತು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here