ಮಾ.3: ಬನ್ನೂರು ಕರ್ಮಲ ಶ್ರೀ ಬಲಮುರಿ ವಿದ್ಯಾಗಣಪತಿ ಸನ್ನಿಧಿಯಲ್ಲಿ 3ನೇ ಬಾರಿಗೆ ಮೂಡಪ್ಪ ಸೇವೆ – ಮಾ.4ಕ್ಕೆ ಪ್ರತಿಷ್ಠಾವರ್ಧಂತಿ

0

*10ಸಾವಿರ ಅಪ್ಪದಿಂದ ಗಣಪನಿಗೆ ಮೂಡಪ್ಪ ಸೇವೆ
*ಮೂಡಪ್ಪ ಸರ್ವಾಲಂಕಾರ ಪೂಜೆ ಬಳಿಕ ಅಷ್ಟಾವಧಾನ ಸೇವೆ
*ಮಾ.4ಕ್ಕೆ ಉಷಃ ಪೂಜೆ ಬಳಿಕ ಮೂಡಪ್ಪ ಉತ್ಥಾನ

ಪುತ್ತೂರು: ಆರಾಧ್ಯ ದೇವರಲ್ಲಿ ಪ್ರಮುಖ ಅಧಿಪತಿಯಾಗಿರುವ ಗಣಪತಿ ಹಲವು ವಿಶೇಷತೆ ಪಡೆದಿರುವುದು ಸಹಜ. ಅದರಲ್ಲೂ ಬಲಮುರಿ ಗಣಪತಿ ಜ್ಞಾನಸಂಪದಾನೆಗೆ ಪ್ರಧಾನ. ಇಂತಹ ಸಂದರ್ಭದಲ್ಲಿ ವಿದ್ಯಾಗಣಪತಿಯೇಂದೆ ಪ್ರಸಿದ್ದಿ ಪಡೆದ ಬನ್ನೂರು ಕರ್ಮಲ ಭಾರತೀ ನಗರದಲ್ಲಿರುವ ಶ್ರೀ ಬಲಮುರಿ ಗಣಪತಿ ವಿದ್ಯಾಗಣಪತಿಯ ರೂಪದಲ್ಲಿದ್ದು. ಈ ವಿದ್ಯಾಗಣಪತಿ ಸನ್ನಿಧಿಯಲ್ಲಿ ಈಗಾಗಲೇ 2 ಬಾರಿ ಮೂಡಪ್ಪ ಸೇವೆ ನಡೆದಿದ್ದು ಇದೀಗ ಮಾ.3 ಮತ್ತು 4ರಂದು ಮೂಡಪ್ಪ ಸೇವೆ ಮತ್ತು ಪ್ರತಿಷ್ಠಾವರ್ಧಂತಿ ನಡೆಯಲಿದೆ.


ಈ ಕುರಿತು ಬಲಮುರಿ ವಿದ್ಯಾಗಣಪತಿ ಮೂಡಪ್ಪ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ಶ್ರೀ ಬಲಮುರಿ ವಿದ್ಯಾಗಣಪತಿ ದೇವರ ಸನ್ನಿಧಿಯಲ್ಲಿ ವೇ ಮೂ ಮಿತ್ತೂರು ತಿರುಮಲೇಶ್ವರ ಭಟ್ ಅವರ ನೇತೃತ್ವದಲ್ಲಿ ಮಾ.3ರಂದು ಮೂಡಪ್ಪ ಸೇವೆ ನಡೆಯಲಿದೆ. ಸಂಜೆ ಗಂಟೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 7 ರಿಂದ ಸಂಕಲ್ಪ, ಮೂಡಪ್ಪ ಸಮರ್ಪಣೆ, ರಾತ್ರಿ ಗಂಟೆ 9 ರಿಂದ ರಂಗಪೂಜೆ, ಕಲ್ಪೋಕ್ತ ಪೂಜೆ, ಸರ್ವಾಲಂಕಾರ ಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ಬೋಜನ ನಡೆಯಲಿದೆ. ಫೆ.4ರಂದು ಬೆಳಿಗ್ಗೆ ಉಷಃ ಪೂಜೆ, ಮೂಡಪ್ಪ ಉತ್ಥಾನ, ಕಲ್ಪೋಕ್ತ ಪೂಜೆ ಮತ್ತು ಮೂಡಪ್ಪ ಪ್ರಸಾದ ವಿತರಣೆ ನಡೆಯಲಿದೆ ಎಂದವರು ಹೇಳಿದರು.


ಮಾ.4ಕ್ಕೆ ಪ್ರತಿಷ್ಠಾವರ್ಧಂತಿ:
ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ಅಧ್ಯಕ್ಷ ಶಿವಶಂಕರ್ ಬೋನಂತಾಯ ಅವರು ಮಾತನಾಡಿ ಮಾ.4ರಂದು ಶ್ರೀ ಬಲಮುರಿ ವಿದ್ಯಾಗಣಪತಿ ದೇವರ ಪ್ರತಿಷ್ಠಾವರ್ಧಂತಿಯು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ ಗಂಟೆ 8 ರಿಂದ ಅರ್ಥಶೀರ್ಷಾಭಿಷೇಕ, ಪೂಜೆ, ಗಂಟೆ 9 ರಿಂದ ಶ್ರೀ ಮಹಾಗಣಪತಿ ಹವನ, ಮಧ್ಯಾಹ್ನ ಗಂಟೆ 12.30 ರಿಂದ ಮಹಾಪೂಜೆ, ಮಂಗಳಾರತಿ, ಮಧ್ಯಾಹ್ನ ಗಂಟೆ 1 ರಿಂದ ಪ್ರಸಾದ ಭೋಜನ, ಸಂಜೆ ಗಂಟೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8 ರಿಂದ ರಂಗಪೂಜೆ ನಡೆಯಲಿದೆ ಎಂದರು.


ಎರಡು ದಿನ ಧಾರ್ಮಿಕ ಉಪನ್ಯಾಸ:
ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಶಂಕರ್ ಭಟ್ ಅವರು ಮಾತನಾಡಿ ದೇವರ ಸನಿಧಾನದಲ್ಲಿ ಮಾ.3ರ ಮೂಡಪ್ಪ ಸೇವೆಯ ಸಂದರ್ಭ ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಬರಕಜೆ ಅನಂತ ನಾರಾಯಣ ಭಟ್ ಮೂಡಪ್ಪ ಸೇವೆಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ನೃತ್ಯೋಪಸನಾ ಕಲಾ ಅಕಾಡೆಮಿಯ ವಿದುಷಿ ಶಾಲಿನ ಆತ್ಮಭೂಷಣ್ ಅವರ ಶಿಷ್ಯೆಯಂದಿರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಫೆ. 4ರಂದು ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ವಿದ್ವಾನ್ ಕೇಶವ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದವರು ಹೇಳಿದರು. ಮೂಡಪ್ಪ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್ ಸುರುಡೇಲು, ದೇವಸ್ಥಾನದ ಸಂಚಾಲಕ ವೆಂಕಟಕೃಷ್ಣ ಎಮ್, ಆಡಳಿತ ಮಂಡಳಿ ಸದಸ್ಯ ಶಂಕರ್ ಭಟ್ ಈ ಸಂದರ್ಭ ಉಪಸ್ಥಿತರಿದ್ದರು.

ಸುಮಾರು 10ಸಾವಿರ ಅಪ್ಪದಿಂದ ಗಣಪನಿಗೆ ಮೂಡಪ್ಪ ಸೇವೆ
ಬಲಮುರಿ ವಿದ್ಯಾಗಣಪತಿ 2007ರ ಮಾ.5ಕ್ಕೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಹಸ್ತದಿಂದ ಪ್ರತಿಷ್ಠಾಪನೆಗೊಂಡಿತ್ತು. ಆದಾದ ಬಳಿಕ ಭಕ್ತಾದಿಗಳ ಬೇಡಿಕೆಯಂತೆ 2009ರಲ್ಲಿ ಮತ್ತು 2015ರಲ್ಲಿ ಗಣಪತಿಗೆ ಮೂಡಪ್ಪ ಸೇವೆ ನೆರವೇರಿಸಲಾಗಿದೆ. ಈ ಬಾರಿಯ 3ನೇ ಬಾರಿ ಮೂಡಪ್ಪ ಸೇವೆ ನಡೆಯಲಿದ್ದು, ಸುಮಾರು 10ಸಾವಿರ ಅಪ್ಪದಿಂದ ಮೂಡಪ್ಪ ಸೇವೆ ನಡೆಯಲಿದೆ. ಅದಕ್ಕಾಗಿ ಸುಮಾರು 120 ಕೆ.ಜಿ. ಅಕ್ಕಿ ಮತ್ತು ಇತರ ಸುವಸ್ತುಗಳನ್ನು ಸಂಗ್ರಹಣೆ ಮಾಡಲಾಗುತ್ತಿದ್ದು, 8 ಮಂದಿ ಬಾನಸಿಗರು ಅಪ್ಪ ತಯಾರಿ ಮಾಡಲಿದ್ದಾರೆ.
ಶಿವಶಂಕರ್ ಭಟ್

LEAVE A REPLY

Please enter your comment!
Please enter your name here