ಸೋಜಾ ಮೆಟಲ್ ಮರ್ಚೆಂಟ್‌ ಮಾಲಕ ವಲೇರಿಯನ್ ಡಿ’ಸೋಜ ನಿಧನ

0

ಪುತ್ತೂರು: ಸಾಮೆತ್ತಡ್ಕ ಎರಡನೇ ಅಡ್ಡರಸ್ತೆ ‘ಸೋಜಾ ವಿಲ್ಲಾ’ ನಿವಾಸಿ, ಪುತ್ತೂರಿನ ಹೃದಯ ಭಾಗದಲ್ಲಿ ಜಿ.ಎಲ್ ಕಾಂಪ್ಲೆಕ್ಸ್ ಎದುರು ಕಾರ್ಯಾಚರಿಸುತ್ತಿರುವ ಸೋಜಾ ಮೆಟಲ್ ಮರ್ಚೆಂಟ್‌ ಮಾಲಕ ವಲೇರಿಯನ್ ಡಿ’ಸೋಜ(87ವ.)ರವರು ಅಸೌಖ್ಯದಿಂದ ಮಾ.1 ರಂದು ನಿಧನ ಹೊಂದಿದರು.


ಮೃತ ವಲೇರಿಯನ್ ಡಿ’ಸೋಜರವರು ಪುತ್ತೂರಿನಲ್ಲಿ ಕಳೆದ 50 ವರ್ಷಗಳಿಂದ ಸೋಜಾ ಮೆಟಲ್ ಮರ್ಚಂಟ್ ಹೆಸರಿನಲ್ಲಿ ಉದ್ಯಮವನ್ನು ಮುಂದುವರೆಸಿಕೊಂಡು ಬಂದಿದ್ದರು. ಮೃತರು ಪತ್ನಿ ನತಾಲಿಯಾ ಡಿ’ಸೋಜ, ಪುತ್ರರಾದ ವಿಲ್ಫ್ರೆಡ್ ಡಿ’ಸೋಜ, ವಿನ್ಸೆಂಟ್ ಡಿ’ಸೋಜ, ಮನೋಜ್ ಡಿ’ಸೋಜ, ಪುತ್ರಿಯರಾದ ಜಾನೆಟ್ ಡಿ’ಸೋಜ, ಪ್ರೀಮಾ ಡಿ’ಸೋಜ, ಶಾಲೆಟ್ ಡಿ’ಸೋಜ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಾ.3 ರಂದು ಮಾಯಿದೆ ದೇವುಸ್ ಚರ್ಚ್ ನ ಏಳ್ಮುಡಿ ಸಿಮೆತರಿಯಲ್ಲಿ ಅಪರಾಹ್ನ ಜರಗಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here