ಪುತ್ತೂರು: ವಾಣಿಯನ್/ಗಾಣಿಗ ಸಮಾಜದ ಕುಲದೇವತೆ, ಶ್ರೀಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಮಾ.1ರಿಂದ 7ರ ತನಕ ನಡೆಯಲಿರುವ ಕಳಿಯಾಟ ಮಹೋತ್ಸವಕ್ಕೆ ಪುತ್ತೂರು ಹಾಗೂ ಕಡಬ ತಾಲೂಕಿನ ವಾಣಿಯನ್/ಗಾಣಿಗ ಸಮುದಾಯದ ಬಂಧುಗಳಿಂದ ಮಾ.2ರಂದು ಹಸಿರು ಹೊರೆಕಾಣಿಕೆ ಸಮರ್ಪಣೆಗೊಂಡಿತು.
ಎರಡೂ ತಾಲೂಕಿನ ವಿವಿಧ ಭಾಗಗಳಲ್ಲಿರುವ ಸಮಾಜ ಬಾಂಧವರಿಂದ ಸಂಗ್ರಹವಾದ ಹಸಿರು ಹೊರೆಕಾಣಿಕೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಜಮಾವಣೆಗೊಂಡು ಬೆಳಿಗ್ಗೆ ದೇವಸ್ಥಾನದ ಮುಂಭಾಗದಿಂದ ಹೊರೆಕಾಣಿಕೆ ಮೆರವಣಿಗೆ ಚಾಲನೆ ನೀಡಲಾಯಿತು. ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿ.ಎಸ್ ಭಟ್ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ನಂತರ ಮೆರವಣಿಗೆಯು ದರ್ಬೆ, ಸಂಟ್ಯಾರ್, ರೆಂಜ, ಆರ್ಲಪದವು, ಪಾಣಾಜೆ, ಪೆರ್ಲ ಮಾರ್ಗವಾಗಿ ಪೆರ್ಣೆ ಕ್ಷೇತ್ರಕ್ಕೆ ಸಾಗಿತು.
ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಸಾದ್, ಸ್ಥಾಪಕ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ, ಮಾಜಿ ಅಧ್ಯಕ್ಷ ಸುಬ್ಬಪ್ಪ ಪಟ್ಟೆ, ಎಂ. ಗೋಪಾಲಕೃಷ್ಣ, ಹರಿಪ್ರಸಾದ್ ಡಿ.ಎಸ್., ಮಹೇಶ್ ಆಲಂಕಾರು, ಬಾಲಕೃಷ್ಣ ಪಟ್ಟೆ, ರಘುರಾಮ ಪಾಟಾಳಿ ಉಪ್ಪಳಿಗೆ, ಪ್ರಮೋದ್ ಪಾಟಾಳಿ, ಅಪ್ಪು ಪಾಟಾಳಿ, ನಾರಾಯಣ ಪಾಟಾಳಿ ಬಲ್ನಾಡು, ರವಿ ಬಾಕಿತ್ತಿಮಾರ್, ದಿನೇಶ್ ಕಡಮಜಲು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.