ಅಧ್ಯಕ್ಷರಾಗಿ ಬೂಡಿಯಾರ್ ರಾಧಾಕೃಷ್ಣ ರೈ, ಪ್ರ.ಕಾರ್ಯದರ್ಶಿ ಬಾಲಚಂದ್ರ ಗೌಡ
ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.21ರಿಂದ 28ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಎಪಿಎಂಸಿ ಮಾಜಿ ಅಧ್ಯಕ್ಷರು, ಜೀಣೋದ್ಧಾರ ಸಮಿತಿ ಅಧ್ಯಕ್ಷರಾಗಿರುವ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿಯಾಗಿ ಬಾಲಚಂದ್ರ ಗೌಡ ದೇವಸ್ಯ ಆಯ್ಕೆಯಾಗಿದ್ದಾರೆ.
ಮಾ.2ರಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಅದಕ್ಕೆ ಪೂರಕವಾಗಿ ಉಪ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಗೌರವ ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಶ್ಯಾಮ್ ಭಟ್ ಹೈದರಾಬಾದ್, ಉದ್ಯಮಿ ಸಂಜೀವ ಪೂಜಾರಿ ಕೂರೇಲು, ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ, ದ್ವಾರಕ ಕನ್ಸ್ಟ್ರಕ್ಷನ್ನ ಗೋಪಾಲಕೃಷ್ಣ ಭಟ್, ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ವೈದ್ಯ ಡಾ.ಸತೀಶ್ ಮರಿಕೆ, ಉಪಾಧ್ಯಕ್ಷರಾಗಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ತಾಲೂಕು ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಜೆ.ಕೆ ಕನ್ಸ್ಟ್ರಕ್ಷನ್ನ ಜಯಕುಮಾರ್ ನಾಯರ್, ಸತೀಶ್ ರೈ ಮಿಶನ್ ಮೂಲೆ, ವಿಜಯ ಬ್ಯಾಂಕ್ನ ನಿವೃತ್ತ ವ್ಯವಸ್ಥಾಕ ಜಗಜ್ಜೀವನ್ದಾಸ್ ರೈ ಚಿಲ್ಮೆತ್ತಾರು, ಪ್ರಗತಿಪರ ಕೃಷಿಕ ರಾಮ ಭಟ್ ಮಚ್ಚಿಮಲೆ, ನಿತಿನ್ ಪಕ್ಕಳ, ಕಿಟ್ಟಣ್ಣ ರೈ ಗೆಣಸಿನಕುಮೇರು, ನಾರಾಯಣ ನಾಯ್ಕ, ಕಾರ್ಯದರ್ಶಿಯಾಗಿ ಗಿರೀಶ್ ಕಿನ್ನಿಜಾಲು, ಧನುಷ್ ಹೊಸಮನೆ, ಕೋಶಾಧಿಕಾರಿಯಾಗಿ ಆರ್ಯಾಪು ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್., ಸದಸ್ಯರಾಗಿ ಯತೀಶ್ ದೇವಾ, ಪುರುಷೋತ್ತಮ ಶೆಟ್ಟಿ ಗೆನಸಿನಕುಮೇರು, ಅಭಿಲಾಷ್ ವಿ. ರೈ ಬಂಗಾರಡ್ಕ, ನಾಗೇಶ್ ಕೆ., ಗೀತಾ ಕಾರಂತ, ರಾಘವೇಂದ್ರ ರೈ ಮೇರ್ಲ, ಕರುಣಾಕರ ಡೆಕ್ಕಳ, ಸುಮ ಭಟ್, ತಾರಾನಾಥ ಮೇರ್ಲ, ಜಗದೀಶ, ಚೇತನ್, ಹರೀಶ್ ಕಾರ್ಪಾಡಿಯವರು ಆಯ್ಕೆಯಾಗಿದ್ದಾರೆ.
ಸ್ವಾಗತ ಸಮಿತಿ ಸಂಚಾಲಕರಾಗಿ ಮಹಾಬಲ ರೈ ವಳತ್ತಡ್ಕ, ಸುಬ್ರಹ್ಮಣ್ಯ ಬಲ್ಯಾಯ, ಆಮಂತ್ರಣ ಸಮಿತಿ ಸಂಚಾಲಕರಾಗಿ ರಾಧಾಕೃಷ್ಣ ಬೋರ್ಕರ್, ವೈದಿಕ ಸಮಿತಿ ಸಂದೀಪ್ ಕಾರಂತ, ಅತಿಥಿ ಸತ್ಕಾರ ದಾಮೋದರ ರೈ ತೊಟ್ಲ, ಹೊರೆಕಾಣಿಕೆ ಡಾ.ಸುರೇಶ್ ಪುತ್ತೂರಾಯ, ಹರೀಶ್ ನಾಯಕ್, ಪ್ರಚಾರ ಮತ್ತು ಮಾಧ್ಯಮ ಸಮಿತಿ ಗಣೇಶ್ ಕಲ್ಲರ್ಪೆ, ಯತೀಶ್ ಉಪ್ಪಳಿಗೆ, ಲೋಕೇಶ್ ಬನ್ನೂರು, ಶ್ರೇಯಸ್, ನೀರಾವರಿ ಹರೀಶ್ ಕಾರ್ಪಾಡಿ, ಕಾರ್ಯಾಲಯ ರಾಜಶೇಖರ, ಚಂದ್ರಕಲಾ, ಧ್ವನಿ ಮತ್ತು ಬೆಳಕು ಪ್ರಜ್ವಲ್ ರೈ ತೊಟ್ಲ, ಆರೋಗ್ಯ ಡಾ.ಸತೀಶ್ ಮರಿಕೆ, ಸ್ವಯಂ ಸೇವಕ ಮಾಧವ ರೈ ಕುಂಬ್ರ, ಮಹಿಳಾ ಸಮಿತಿ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಅಲಂಕಾರ ಮೋಹನ್ ಸಿಂಹವನ, ಸಾಂಸ್ಕೃತಿಕ ಸಮಿತಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ದಯಾನಂದ ರೈ, ರಂಗಭೂಮಿ ಕಲಾವಿದ ಸುಬ್ಬು ಸಂಟ್ಯಾರ್, ಸಭಾ ಕಾರ್ಯಕ್ರಮ ಸೀತಾರಾಮ ರೈ ಕೈಕಾರ, ಭಜನಾ ಸಮಿತಿ ಪ್ರದೀಪ ಕೃಷ್ಣ ಬಂಗಾರಡ್ಕ, ಅಭಿಲಾಷ್ ವಿ.ರೈ, ಸಾಂತಪ್ಪ ಪೂಜಾರಿ, ಅನ್ನಸಂತರ್ಪಣೆ ಜಯಂತ ಶೆಟ್ಟಿ ಕಂಬಳತ್ತಡ್ಡ, ಧನಂಜಯ ರೈ ಮೇರ್ಲ, ನಾಗೇಶ ಸಂಪ್ಯ, ಉಗ್ರಾಣ ಸಮತಿ ದೇವಯ್ಯ ಗೌಡ, ಸ್ವಚ್ಚತಾ ಸಮಿತಿ ರಮಾನಂದ ಬಲ್ಯಾಯ, ವಾಹನ ನಿಲುಗಡೆ ಶ್ರೇಯಸ್ ನೀರ್ಪಾಜೆ, ಚಪ್ಪರ ಸಮಿತಿ ನಾರಾಯಣ ನಾಯ್ಕ, ಛಾಯಾಗ್ರಹಣ ವಸಂತ ಕಲ್ಲರ್ಪೆ, ನಾಗರಾಜ ನಡುಮನೆ, ದೈವ ಕೋಲ ಸಮಿತಿ ಗಣೇಶ್ ಮಡಿವಾಳರವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಬ್ರಹ್ಮಕಲಶೋತ್ಸವ ಸಮಿತಿಗೆ ಪದಾಧಿಕಾರಿಗಳಾಗಿ ಘಟಾನುಘಟಿ ನಾಯಕರನ್ನೇ ಆಯ್ಕೆ ಮಾಡಿದ್ದು ನಮಗೆ ಈಗ ಆನೆ ಬಲ ಬಂದಿದೆ. ಇನ್ನು ೪೯ ದಿನಗಳು ಮಾತ್ರ ಬಾಕಿಯಿದ್ದು ವಿವಿಧ ಉಪ ಸಮಿತಿ ಸಂಚಾಲಕರಿಗೆ ಬಹಳಷ್ಟು ಕೆಲಸವಿದೆ. ಉಪ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬೇಕು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನೆರವೇರಿಸುವಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ ಅವರು ವಿನಂತಿಸಿದರು.
ಸಂಜೀವ ಪೂಜಾರಿ ಕೂರೇಲು ಮಾತನಾಡಿ, ಬ್ರಹ್ಮಕಲಶೋತ್ಸವಕ್ಕೆ ಪೂರಕವಾಗಿ ವಿವಿಧ ಉಪ ಸಮಿತಿಗಳ ಮೂಲಕ ಹುದ್ದೆ ನೀಡಲಾಗಿದೆ. ಎಲ್ಲರಿಗೂ ಭಾಗಿಯಾಗುವ ಅವಕಾಶ ದೊರೆತಿದೆ. ಊರವರ ಸಹಕಾರದಿಂದ 2009ರಲ್ಲಿ ನಡೆದ ಬ್ರಹ್ಮಕಲಶೋತ್ಸವಕ್ಕಿಂತ ಉತ್ತಮ ರೀತಿಯಲ್ಲಿ ನಡೆಯಬೇಕು ಎಂದರು.
ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಬ್ರಹ್ಮಕಲಶೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದು ಹೊರೆಕಾಣಿಕೆ ಸಮಿತಿಯ ಜವಾಬ್ದಾರಿ ದೊರೆತಿದ್ದು ಇದನ್ನು ಉತ್ತಮವಾಗಿ ನಿರ್ವಹಿಸಲಾಗುವುದು ಎಂದರು.
ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಧಾಕರ ರಾವ್ ಮಾತನಾಡಿ, ಕಾರ್ಪಾಡಿಗೆ ದೇವಸ್ಥಾನವು ಆರ್ಯಾಪು ಗ್ರಾಮಕ್ಕೆ ಮಾತ್ರ ಸೀಮಿತವಾಗಿರದೆ ಸುತ್ತ ಮುತ್ತಲ ಸುಮಾರು 15 ಗ್ರಾಮಗಳ ಭಕ್ತಾದಿಗಳ ಬರುತ್ತಿದ್ದು ಅವರನ್ನು ಆ ಗ್ರಾಮದವರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.
ದ್ವಾರಕ ಕನ್ಸ್ಸ್ಟ್ರಕ್ಷನ್ನ ಗೋಪಾಲಕೃಷ್ಣ ಭಟ್, ಆಡಳಿತಾಧಿಕಾರಿಯಾಗಿರುವ ಕಂದಾಯ ನಿರೀಕ್ಷಕ ಗೋಪಾಲ್, ಸಂದೀಪ್ ಕಾರಂತ ಮಾತನಾಡಿ ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು. ಡಾ.ಸತೀಶ್ ಮರಿಕೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೂ.4.25ಲಕ್ಷ ವಾಗ್ದಾನ
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ನಡೆಯಲಿರುವ ನಿರಂತರ ಅನ್ನದಾನ ಸೇವಾ ಕಾರ್ಯಗಳಿಗೆ ರೂ.4.25ಲಕ್ಷ ದೇಣಿಗೆ ನೀಡುವುದಾಗಿ ಸಭೆಯಲ್ಲಿ ವಾಗ್ದಾನ ಮಾಡಿದರು.
ಒಲೆ ರಹಿತ ಮನೆ:
ದೇವಸ್ಥಾನದಲ್ಲಿ ಎಂಟು ದಿನಗಳ ಕಾಲ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಸಮಯದಲ್ಲಿ ಬೆಳಿಗ್ಗೆ ಹಾಗೂ ಸಂಜೆಯ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ, ಇತರ ಸಮಯಗಳಲ್ಲಿ ಪಾನೀಯಗಳು ನಿರಂತರವಾಗಿ ನಡೆಯಲಿದ್ದು ದೇವಸ್ಥಾನದ ಪರಿಸರದ ಮನೆಗಳಲ್ಲಿ ಯಾರೂ ಅಡುಗೆ ಮಾಡಬೇಕಾಗಿಲ್ಲ. ಹೀಗಾಗಿ ಯಾವುದೇ ಮನೆಗಳಲ್ಲಿಯೂ ಒಲೆ ಉರಿಸುವುದು ಬೇಡ. ಊಟ, ಉಪಾಹಾರವನ್ನು ದೇವಸ್ಥಾನದಲ್ಲಿಯೇ ಸೇವಿಸಿ, ದೇವಸ್ಥಾನದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ರಾಧಾಕೃಷ್ಣ ಬೋರ್ಕರ್ ತಿಳಿಸಿದರು.
ನೂರಾರು ಮಂದಿ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಜಯಂತ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.