ಕಡಬ ಪ.ಪೂ. ಕಾಲೇಜಿನಲ್ಲಿ ಮುಸುಕುದಾರಿ ಯುವಕನಿಂದ ಮೂವರು ವಿದ್ಯಾರ್ಥಿಗಳಿಗೆ ಆ್ಯಸಿಡ್ ದಾಳಿ

0

ಕಡಬ: ಇಲ್ಲಿನ ಪ.ಪೂ.ಕಾಲೇಜಿನಲ್ಲಿ ಮಾಸ್ಕ್ ಧರಿಸಿದ ಯುವಕನೊರ್ವ ಕಾಲೇಜು ಆವರಣದೊಳಗೆ ಆಗಮಿಸಿ ಆ್ಯಸಿಡ್ ದಾಳಿ ನಡೆಸಿದ್ದಾನೆ. ದ್ವಿತೀಯ ಪಿಯುಸಿಯ ಮೂರು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಯುವಕನನ್ನು ಕೇರಳ ಮೂಲದ 23 ವರ್ಷದ ಎಂಬಿಎ ವಿದ್ಯಾರ್ಥಿ ಅಬೀನ್ ಎಂದು ಗುರುತಿಸಲಾಗಿದೆ. 17 ವರ್ಷ ಪ್ರಾಯದ ಪಿಯು ವಿದ್ಯಾರ್ಥಿನಿ ಮೇಲೆ ಅಬೀನ್‌ ಆ್ಯಸಿಡ್ ದಾಳಿ ನಡೆಸಿದ್ದು, ಆಕೆಯ ಪಕ್ಕದಲ್ಲಿ ಕುಳಿತಿದ್ದ ಮತ್ತಿಬ್ಬರು ವಿದ್ಯಾರ್ಥಿನಿಯರು ಆ್ಯಸಿಡ್ ದಾಳಿಯಿಂದ ಗಾಯಗೊಂಡಿದ್ದಾರೆ. ಮೂರು ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಕಡಬ ಪದವಿಪೂರ್ವ ಕಾಲೇಜಿನಲ್ಲಿ ಆ್ಯಸಿಡ್ ದಾ*ಳಿ -||BREAKING NEWS||

LEAVE A REPLY

Please enter your comment!
Please enter your name here