ಪರಿವಾರ ಬಂಟರ ಸಂಘ ಮಂಗಳೂರು ಇದರ ಪುತ್ತೂರು ವಲಯದ ಸದಸ್ಯರ ಸಭೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

0

ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು ಇದರ ಪುತ್ತೂರು ವಲಯದ ಸದಸ್ಯರ ಸಭೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಮಾ. 3ರಂದು ಪುತ್ತೂರು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರಗಿತು.

ಗಣಪತಿ ಹೋಮ ಮತ್ತು ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ನಡೆಯಿತು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಪುತ್ತೂರು ವಲಯ ಸಮಿತಿ ಅಧ್ಯಕ್ಷ ಸುಧಾಕರ ಕೆ.ಪಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್.ಎ, ಕಾಯರ್‌ಮಜಲು, ಪ್ರಧಾನ ಕಾರ್ಯದರ್ಶಿ ಮನೋಹರ ನಾಯಕ್ ಕೊಳಕ್ಕಿಮಾರ್, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಂಘದ ಪುತ್ತೂರು ವಲಯದ ಉಪಾಧ್ಯಕ್ಷ ಶಾಂತ ಕುಮಾರ್ ನಾಯಕ್, ಪುತ್ತೂರು ವಲಯ ಕಾರ್ಯದರ್ಶಿ ಕವನ್ ನಾಯಕ್, ಮಹಿಳಾ ವೇದಿಕೆಯ ಅಧ್ಯಕ್ಷೆ ಶಕಿಲಾ ಡಿ ನಾಯಕ್, ಯುವ ವೇದಿಕೆಯ ಅಧ್ಯಕ್ಷ ಅಭಿಜಿತ್ ಕೊಳಕ್ಕಿಮಾರ್ ಉಪಸ್ಥಿತರಿದ್ದರು.

ಬೈಲಾ ತಿದ್ದುಪಡಿಯ ಪ್ರಕಾರ ಹೊಸ ಸದಸ್ಯರ ನೋಂದಣಿಯ ಶುಲ್ಕ ಮತ್ತು ಸದಸ್ಯತನದ ಬಗ್ಗೆ ಮನೋಹರ ನಾಯಕ್ ವಿವರಣೆ ನೀಡಿದರು. ಅಧ್ಯಕ್ಷ ಸುಧಾಕರ ಕೆ.ಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ವರದಿ ಸಾಲಿನಲ್ಲಿ ಪುತ್ತೂರು ವಲಯದಿಂದ ಹಲವು ರೀತಿಯ ಯೋಜನೆಗಳನ್ನು ಹಾಕಿಕೊಂಡು ಸಂಘದ ಸಂಪನ್ಮೂಲ ಕ್ರೋಢೀಕರಣ ಮಾಡಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರ ನಡೆಸುವುದು, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡುವ ಯೋಜನೆಯ ಬಗ್ಗೆ ಮತ್ತು ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು.

ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಶೇ 70 ಮತ್ತು ಹೆಚ್ಚು ಅಂಕ ಪಡೆದ ಸಮಾಜದ ಪುತ್ತೂರು ವಲಯದ 20 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಕಾಸರಗೋಡಿನಲ್ಲಿ ಡಿಸೆಂಬರ್ 23 ಮತ್ತು24 ರಂದು ಜರಗಿದ ಸಂಘದ ಸುವರ್ಣ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪುತ್ತೂರು ವಲಯದಿಂದ ‘ತುಳು ನಾಡು ವೈಭವ’ ನೃತ್ಯರೂಪಕ ಕಾರ್ಯಕ್ರಮವನ್ನು ನೀಡಿದ್ದು ಸದ್ರಿ ನೃತ್ಯ ರೂಪಕದಲ್ಲಿ ಅಭಿನಯಿಸಿದವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್ ಎ. ರವರು, ಸಂಘ ಹೊಂದಿರುವ ಸ್ಥಿರಾಸ್ತಿಯಲ್ಲಿ ಕಲ್ಯಾಣ ಮಂಟಪ ನಿರ್ಮಿಸುವ ಬಗ್ಗೆ ಕಾರ್ಯ ಪ್ರವರ್ತಕರಾಗಿದ್ದು ಎಲ್ಲರ ಸಹಕಾರ ಕೋರಿದರು.

ಜತೆ ಕಾರ್ಯದರ್ಶಿ ಪ್ರೇಮಾನಂದ ನಾಯಕ್ ವರದಿ ವಾಚನ ಮಾಡಿದರು. ಜಿಯಾ ಮತ್ತು ಯಶ್ವಿ ಪ್ರಾರ್ಥಿಸಿ,ಮಹಿಳಾ ವೇದಿಕೆ ಕಾರ್ಯದರ್ಶಿ ಸ್ಮಿತಾ ಸುಜಿತ್ ನಾಯಕ್ ಸ್ವಾಗತಿಸಿ, ಸರ್ವೇಶ್ ನಾಯಕ್ ವಂದಿಸಿ,ವೀಕ್ಷಾ ಕಾರ್ಯಕ್ರಮ ನಿರೂಪಿಸಿದರು.ಸಂದೀಪ್ ನಾಯಕ್, ರಶ್ಮಿ ಉಮಾಶಂಕರ್ ನಾಯಕ್, ಪೂರ್ಣಿಮಾ ಚಿದಾನಂದ ನಾಯಕ್, ಲಿಖೀತ್ ನಾಯಕ್, ಮಿತೇಶ್ ನಾಯಕ್ ಸಹಕರಿಸಿದರು.

ಸನ್ಮಾನ:
ಅಗ್ನಿವೀರ್ ಸೈನ್ಯ ದಳಕ್ಕೆ ಸೇರ್ಪಡೆಗೊಂಡ ಭವಿಷ್, ಸಮಾಜ ಸೇವೆ ಸಲ್ಲಿಸುತ್ತಿರುವ ಡಾ. ನಮಿತಾ ಎಸ್ ನಾಯಕ್, ದೈವದ ಪಾರಿ ಹೇಳುವ ಅಡ್ವಕೇಟ್ ತೇಜಸ್ .ಯು, 22 ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಚಿದಾನಂದ ನಾಯಕ್, ಕಬಡ್ಡಿಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಸಿದ ಶಿವನೀತ್ ನಾಯ್ಕ್, ಚಿತ್ರಕಲೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ
ನಿಲಿಶ್ಕಾ ರವರನ್ನು ಸಭೆಯಲ್ಲಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here