ಉಪ್ಪಿನಂಗಡಿ: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು 34 ನೆಕ್ಕಿಲಾಡಿ ಗ್ರಾಮಕ್ಕೆ 10 ಕೋಟಿಯ 90 ಲಕ್ಷದ 5 ಸಾವಿರ ರೂ. ಅನುದಾನ ಒದಗಿಸಿದ್ದು, ಅದರಲ್ಲಿ 90.೦5 ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾ.6ರಂದು ಗುದ್ದಲಿ ಪೂಜೆ ನಡೆಯಲಿದೆ ಎಂದು 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ತಿಳಿಸಿದ್ದಾರೆ.
ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾದ ದರ್ಬೆ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ 30 ಲಕ್ಷ ರೂ. ಅನುದಾನವನ್ನು ಶಾಸಕರು ನೀಡಿದ್ದು, ಈ ಸ್ಥಳದಲ್ಲಿ ಮಧ್ಯಾಹ್ನ 2 ಗಂಟೆಗೆ ಎಲ್ಲಾ ಕಾಮಗಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈಯವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಸಂತೆಕಟ್ಟೆ ಬಳಿಯ ಕಡವಿನ ಬಾಗಿಲು ಬಳಿ ಕಾಂಕ್ರೀಟ್ ಚರಂಡಿ ರಚನೆಗೆ 05.05 ಲಕ್ಷ ರೂ., ಸಂತೆಕಟ್ಟೆ ಬಳಿಯ ಕಡವಿನ ಬಾಗಿಲು ಬಳಿ ಕಾಂಕ್ರೀಟ್ ಚರಂಡಿ ರಚನೆಗೆ 05.05 ಲಕ್ಷ ರೂ., ಹಳೆಯೂರು ಬಳಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 10 ಲಕ್ಷ ರೂ., ಶಾಂತಿಯಡ್ಕ ಪರಿಶಿಷ್ಟ ಜಾತಿ ಪಂಗಡದ ಕಾಲನಿಯ ರಸ್ತೆ ಅಭಿವೃದ್ಧಿಗೆ 13 ಲಕ್ಷ ರೂ., ಶಾಂತಿನಗರ ಶ್ರೀ ವಿಷ್ಣಮೂರ್ತಿ ದೇವಸ್ಥಾನ ಅಭಿವೃದ್ಧಿ 5 ಲಕ್ಷ ರೂ., ಶಾಂತಿನಗರದ ಬಳಿ ಬೇರಿಕೆ ಹೊಸಕಾಲನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ನೆಕ್ಕಿಲಾಡಿಯ ಹಳೆ ಮಂಗಳೂರು ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ., ಕರ್ವೇಲ್ – ಮಾಡತ್ತಾರು ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ., ಮೈಂದಡ್ಕ ಕ್ರೈಸ್ತ ದಫನ ಭೂಮಿ ಬಳಿ ರಸ್ತೆ ಕಾಂಕ್ರೀಟೀಕರಣಕ್ಕೆ 5 ಲಕ್ಷ ರೂ. ಅನುದಾನವನ್ನು ಶಾಸಕರು ನೀಡಿದ್ದಾರೆ. ಅಲ್ಲದೇ, ಕರ್ವೇಲ್ ಅಂಗನವಾಡಿಯಲ್ಲಿ ಅಡುಗೆ ಕೋಣೆ ರಚನೆಗೆ 2 ಲಕ್ಷ ರೂ. ಅನುದಾನ ನೀಡಿದ್ದು, ಇದರ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಬೊಳುವಾರು- 34 ನೆಕ್ಕಿಲಾಡಿ ರಾಜ್ಯ ಹೆದ್ದಾರಿಯಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಬೇರಿಕೆ- ಬೊಳಂತಿಲ ಹೆದ್ದಾರಿ ಚತುಷ್ಪಥ ಕಾಮಗಾರಿಗೆ 10 ಕೋಟಿ ರೂ. ಅನುದಾನ ನೀಡಿದ್ದು, ಇದರ ಕಾಮಗಾರಿ ಕೂಡಾ ಪ್ರಗತಿಯಲ್ಲಿದೆ. 34 ನೆಕ್ಕಿಲಾಡಿ ಗ್ರಾ.ಪಂ.ನ ಇತಿಹಾಸದಲ್ಲಿಯೇ ಮೊದಲೆಂಬಂತೆ ಶಾಸಕರಾಗಿ ಆಯ್ಕೆಯಾದ ಅತ್ಯಲ್ಪ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ನಮ್ಮ ಗ್ರಾಮಕ್ಕೆ ಹತ್ತು ಕೋಟಿಯ ತೊಂಭತ್ತು ಲಕ್ಷದ ಐದು ಸಾವಿರ ರೂಪಾಯಿ ಅನುದಾನವನ್ನು ಶಾಸಕರು ಒದಗಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.