ಕುಂಬ್ರ ಸುಶಾ ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ

0

ಪುತ್ತೂರು: ಕುಂಬ್ರ ನ್ಯೂ ಪ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಶಾ ಡ್ರೆಸ್ಸಸ್, ಫ್ಯಾನ್ಸಿ ಮತ್ತು ಸ್ಟೇಷನರಿ ಇದರ ಮಾಲಕರಾದ ಸುರೇಶ್ ಕುಮಾರ್ ತಿಂಗಳಾಡಿ ಇವರು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯ ಹೆಸರಿನಲ್ಲಿ ನೀಡುತ್ತಿರುವ 11ನೇ ವರ್ಷದ ಸುಶಾ ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಇತ್ತೀಚೆಗೆ ನಡೆದ ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನೀಡಲಾಯಿತು.

1 ರಿಂದ 7ನೇ ತರಗತಿ ವಿಭಾಗದಲ್ಲಿ 7ನೇ ತರಗತಿಯ ಕಾವ್ಯಲಕ್ಷ್ಮೀ, 7 ರಿಂದ 10ನೇ ತರಗತಿ ವಿಭಾಗದಲ್ಲಿ 10ನೇ ತರಗತಿಯ ಪ್ರಾರ್ಥನ್, ಪದವಿಪೂರ್ವ ವಿಭಾಗದಲ್ಲಿ ಅರ್ಪಿತಾರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಸ್ಮರಣಿಕೆ ಹಾಗೂ ನಗದನ್ನು ಒಳಗೊಂಡಿದೆ.
ಈ ಸಂದರ್ಭದಲ್ಲಿ ಉದ್ಯಮಿ ಅಹ್ಮದ್ ಹಾಜಿ ಆಕರ್ಷಣ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು, ಉದ್ಯಮಿ ಅಶೋಕ್ ಪೂಜಾರಿ ಬೊಳ್ಳಾಡಿ, ಕುಕ್ಕುಮುಗೇರು ಶ್ರೀ ಕ್ಷೇತ್ರದ ಮೊಕ್ತೇಸರ ಎ.ಜಿ ವಿಜಯ ಕುಮಾರ್ ರೈ, ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ ಸಹಿತ ವಿವಿಧ ಗಣ್ಯರು, ಪ್ರಾಂಶುಪಾಲ ಶರ್ಮಿಳಾ ಗ್ಲ್ಯಾಡಿಸ್, ಪ್ರೌಢ ಶಾಲಾ ಮುಖ್ಯಗುರು ಮಮತಾ ಕೆಎಸ್, ಪ್ರಾಥಮಿಕ ಶಾಲಾ ಮುಖ್ಯಗುರು ಶೀಲಾವತಿ ಹಾಗೂ ಶಿಕ್ಷಕ ವೃಂದದವರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here