ನಮ್ಮ ಪುತ್ತೂರಿನ ಶಕ್ತಿ ಕರ್ನಾಟಕ್ಕೆ ಗೊತ್ತಾಗಬೇಕು – ಅಶೋಕ್ ರೈ
ಪುತ್ತೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳ ಸಮಾವೇಶವು ಮಾ.7ರಂದು ಕಿಲ್ಲೆಮೈದಾನದಲ್ಲಿ ನಡೆಯಲಿದ್ದು ಇದರ ಪೂರ್ವ ಸಿದ್ದತೆಯಾಗಿ ಮಾ.5ರಂದು ಸಂಜೆ ಬೊಳುವಾರು ಬೈಪಾಸ್ ರಸ್ತೆಯ ಉದಯಗಿರಿ ಭಾಗೀರಥಿ ಸಭಾಭವನದಲ್ಲಿ ಕಾಂಗ್ರೆಸ್ ಪ್ರಮುಖರ ಸಭೆ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ನಾಳೆದಿನ ಸಮಾವೇಶಕ್ಕೆ 15 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ದ.ಕ, ಉಡುಪಿ ಜಿಲ್ಲೆಯಲ್ಲಿ ಪ್ರಭಲವಾಗಿರುವ ವಿಧಾನಸಭಾ ಕ್ಷೇತ್ರ ಪುತ್ತೂರು. ನಮ್ಮ ಪುತ್ತೂರಿನ ಶಕ್ತಿ ಕರ್ನಾಟಕ್ಕೆ ಗೊತ್ತಾಗಬೇಕು. ಈ ನಿಟ್ಟಿನಲ್ಲಿ ಸಮಾವೇಶ ಯಶಸ್ವಿಯಾಗಬೇಕು. ಬೆಳಿಗ್ಗೆ 11 ಗಂಟೆಗೆ ಕಿಲ್ಲೆ ಮೈದಾನದಲ್ಲಿ ಎಲ್ಲರು ಸೇರಬೇಕು. ಅಧಿಕಾರಿಗಳು 5 ಸಾವಿರ ಜನರ ಲೆಕ್ಕ ಕೊಟ್ಟಿದ್ದಾರೆ. 10 ಸಾವಿರ ಜನ ಸಂಖ್ಯೆ ನಾವು ಸೇರಿಸಬೇಕು. ಕೇವಲ 2 ಗಂಟೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಬಳಿಕ ಊಟದ ವ್ಯವಸ್ಥೆ ಮಾಡಿದ್ದೇವೆ. ಒಟ್ಟು ರೂ.50 ಲಕ್ಷ ಖರ್ಚು ಆಗಲಿದೆ. ನಿಮಗೆ ಬೇರೆ ಯಾವ ಒತ್ತಡ ಕೊಡುವುದಿಲ್ಲ. ನಿಮಗೆ ಜನ ಸೇರಿಸುವುದಷ್ಟೇ ಕೆಲಸ. ಈ ಕಾರ್ಯಕ್ರಮ ಒಳ್ಳೆಯ ಸಂದೇಶ ಕೊಡುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ ಬಿ ವಿಶ್ವನಾಥ ರೈ, ವಿಟ್ಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಎಮ್ ಎಸ್ ಮಹಮ್ಮದ್, ಪ್ರಸಾದ್ ಕೌಶಲ್ ಶೆಟ್ಟಿ, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ ಸೋಜ, ಕೆ ಪಿ ಸಿ ಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಸ್ವಾಗತಿಸಿದರು. ಅಮಳ ರಾಮಚಂದ್ರ ಭಟ್, ಸಂತೋಷ್ ಭಂಡಾರಿ , ವಿಶ್ಚಜೀತ್ ವಂದೇ ಮಾತರಂ ಹಾಡಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.