ಬಡಗನ್ನೂರು: ಕಾಡು ಪ್ರಾಣಿಗಳಿಗಳು ಆಹಾರ ಹುಡುಗಿ ಕೊಂಡು ಕಾಡಿನಿಂದ ನಾಡಿಗೆ ಬಂದು ಕೃಷಿ ನಾಶ ಮಾಡಿದ ಬಗ್ಗೆ ವರದಿಯಾಗಿದೆ.
ಬಡಗನ್ನೂರು ಗ್ರಾಮದ ಕೆಳಗಿನ ಪೇರಾಲು ಪ್ರಭಾಕರ ರೈ ಹಾಗೂ ಪದ್ಮಾವತಿ ರೈ ತೋಟದಲ್ಲಿ ಮಾ.5ರಂದು ರಾತ್ರಿ ಕಾಡು ಹಂದಿ ದಾಳಿ ಮಾಡಿ ದೊಡ್ಡದಾಗಿ ಬೆಳೆದು ನಿಂತ ಅಡಿಕೆ ಮರದ ಬುಡವನ್ನು ಅಗೆದು ಸಮಾರು 30ರಿಂದ 40 ಎಡೆ ಸಸಿಯನ್ನು ಬೇರು ಸಹಿತ ಕಿತ್ತು ಹಾಕಿದೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ.

ಈ ಭಾಗದಲ್ಲಿ ಕಾಡು ಹಂದಿ ಹಾವಳಿ ನಿರಂತವಾಗಿದೆ. ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬರುವ ಕಾಡು ಹಂದಿಗಳು ಕೃಷಿಯನ್ನು ನಾಶ ಮಾಡುತ್ತಿದೆ. ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳನ್ನು ಕೆಲವರು ಭೇಟೆಯಾಡುತ್ತಿದ್ದಾರೆ ಎಂಬ ಮಾಹಿತಿಗಳೂ ಕೂಡ ಇದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು ಎಂಬ ಆಗ್ರಹವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.