ಪುತ್ತೂರು: ಪರ್ಲಡ್ಕ ಬೈಪಾಸ್ ಬಳಿ ಫೆ.29 ರಂದು ಬೈಕ್ ಸ್ಕಿಡ್ ಆಗಿ ಬಿದ್ದು, ಗಂಭೀರವಾಗಿ ಗಾಯಗೊಂಡ ಮೆಕ್ಯಾನಿಕ್ ಶಾಂತಿಗೋಡಿನ ಯುವಕ ಪ್ರಸಾದ್ ಚಿಕಿತ್ಸೆ ಫಲಕಾರಿಯಾಗದೆ ಮಾ.6 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶಾಂತಿಗೋಡು ಗ್ರಾಮದ ಬೀರ್ಮಕಜೆ ನಿವಾಸಿ ಪುತ್ತೂರು ಬೈಪಾಸ್ ರಸ್ತೆಯ ಗ್ಯಾರೆಜೊಂದರಲ್ಲಿ ಮೆಕಾನಿಕ್ ಆಗಿರುವ ಪ್ರಸಾದ್ (27) ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಪ್ರಸಾದ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.