ನರಿಮೊಗರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾ.15, 16ರಂದು ನಡೆಯಲಿರುವ ಸಾರ್ವಜನಿಕ ಶ್ರೀ ಮಹಾಮೃತ್ಯುಂಜಯ ಹೋಮ, ವರ್ಷಾವಧಿ ಜಾತ್ರೋತ್ಸವ, ದೈವದ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಮಾ.9ರಂದು ನಡೆಯಿತು.
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕುತ್ತಿಗದ್ದೆ ಜನಾರ್ದನ ಜೋಯಿಸರ ತೋಟದಿಂದ ಬಾಳೆಗೊನೆಯನ್ನು ಕಡಿದು ದೇವಸ್ಥಾನಕ್ಕೆ ಬ್ಯಾಂಡ್ ವಾಲಗದೊಂದಿಗೆ ವಿಧಿವತ್ತಾಗಿ ತರಲಾಯಿತು. ಪ್ರಧಾನ ಅರ್ಚಕ ರಮೇಶ್ ಬೈಪಡಿತ್ತಾಯರವರು ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು. ಅರ್ಚಕ ಯರ್ಮುಂಜ ಗೋಪಾಲಕೃಷ್ಣ ಭಟ್, ಸಹಾಯಕ ಅರ್ಚಕ ಜಯಪ್ರಕಾಶ್ ಭಟ್ ಸಹಕರಿಸಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ಸದಸ್ಯೆ ವೇದಾವತಿ ಬಾಳಪ್ಪ ಗೌಡ, ಮಾಜಿ ಅಧ್ಯಕ್ಷ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಮಾಜಿ ಸದಸ್ಯ ಗುರುರಾಜ ಪುತ್ತೂರಾಯ ಕೆ, ಪ್ರಮುಖರಾದ ಚಂದ್ರಶೇಖರ ಕುರೆಮಜಲು, ಪ್ರಭಾಕರ ಭಟ್ ಕಾಳಿಂಗಹಿತ್ಲು, ತಿಮ್ಮಪ್ಪ ಗೌಡ ನಡುಬೈಲು, ವಿಶ್ವನಾಥ ಗೌಡ ಕರೆಮನೆ, ಕಿಟ್ಟಣ್ಣ ಶೆಟ್ಟಿ ನಡುಬೈಲು, ಬಾಳಪ್ಪ ಗೌಡ ಕೆದ್ಕಾರು, ಮೋಹನ ನಾಯ್ಕ್ ಕೇದಗೆದಡಿ, ದೇವಪ್ಪ ನಾಯ್ಕ್ ಕೇದಗೆದಡಿ, ಮಾದವ ಮಡಿವಾಳ, ಉಮೇಶ್ ಕಡ್ಯ, ಸಿಬ್ಬಂದಿಗಳಾದ ವಿಜಿತ್, ಪ್ರೇಮಾ ಉಪಸ್ಥಿತರಿದ್ದರು.