ನರಿಮೊಗರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾ.8ರಂದು ಮಹಾಶಿವರಾತ್ರಿಯ ಪ್ರಯುಕ್ತ ಸಿಯಾಳಾಭಿಷೇಕ, ಮಹಾಪೂಜೆ, ರುದ್ರಪಾರಾಯಣ ಸಹಿತ ಏಕಾದಶ ರುದ್ರಾಭಿಷೇಕ, ಬಿಲ್ವಾರ್ಚನೆ, ಭಜನಾ ಕಾರ್ಯಕ್ರಮಗಳು ನಡೆಯಿತು.
ಪ್ರಧಾನ ಅರ್ಚಕ ರಮೇಶ ಬೈಪಡಿತ್ತಾಯರವರು ಬೆಳಿಗ್ಗೆ ಶ್ರೀದೇವರಿಗೆ ಸಿಯಾಳಾಭಿಷೇಕ, ಮಹಾಪೂಜೆ ನೆರವೇರಿಸಿದರು. ಸಂಜೆ ಅರ್ಚಕ ಯರ್ಮುಂಜ ಗೋಪಾಲಕೃಷ್ಣ ಭಟ್ರವರು ಶ್ರೀದೇವರಿಗೆ ಏಕಾದಶರುದ್ರಾಭಿಷೇಕ, ಬಿಲ್ವಾರ್ಚನೆ, ಗೋತಳಿಯಿಂದ ತಯಾರಿಸಿದ ಶುದ್ಧ ವಿಭೂತಿ ಭಸ್ಮಾರ್ಚನೆ, ರುದ್ರಾಕ್ಷಿ ಮಾಲೆ, ಕನಕ ನೇತ್ರ ಧಾರಣೆ ಸಹಿತ ಮಹಾಪೂಜೆ ನೆರವೇರಿಸಿದರು. ವೇದ ಸಂವರ್ಧನಾ ಪ್ರತಿಷ್ಠಾನ ಪುತ್ತೂರು ಹಾಗೂ ಸ್ಥಳೀಯ ರುದ್ರಾಧ್ಯಾಯಿಗಳು ರುದ್ರಪಾರಾಯಣ ನಡೆಸಿಕೊಟ್ಟರು. ಭಕ್ತಾದಿಗಳಿಗೆ ಶ್ರೀ ದೇವರ ಪ್ರಸಾದ, ಲಘು ಉಪಹಾರ ವಿತರಿಸಲಾಯಿತು. ಸಹಾಯಕ ಅರ್ಚಕ ಜಯಪ್ರಕಾಶ್ ಭಟ್, ಶಿವಪ್ರಸಾದ ಶಾಂತಿಗೋಡು, ಕೃಷ್ಣಪ್ರಸಾದ ಶರ್ಮರವರು ಸಹಕರಿಸಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ಸದಸ್ಯ ಕುತ್ತಿಗದ್ದೆ ಜನಾರ್ದನ ಜೋಯಿಸ, ಸಿಬ್ಬಂದಿಗಳಾದ ವಿಜಿತ್, ಪ್ರೇಮಾ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.