ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ತಾಲೂಕು ಮಹಿಳಾ ಗೌಡ ಸೇವಾ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳೆಯರಿಂದಲೇ ತಾಳಮದ್ದಳೆ ಸಹಿತ ವಿವಿದ ಸ್ಪರ್ಧಾ ಕಾರ್ಯಕ್ರಮ, ಸಾಧಕಿಗೆ ಸನ್ಮಾನ ನಡೆಯಿತು.
ಮಧ್ಯಾಹ್ನ ಶೇಷವೇಣಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಹಿಳೆಯರಿಗೆ ಹೂ ಜೋಡಣೆ ಮತ್ತು ಲಕ್ಕಿ ಗೇಮ್ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರಿಗೆ ಗೌರವ ಕಾರ್ಯಕ್ರಮ ನಡೆಯಿತು.
ಮಹಿಳಾ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಮಾನವ ಸಂಪನ್ನೂಲ ತರಬೇತಿದಾರ ವಚನಾ ಜಯರಾಮ್ ಅವರು ಮಾತನಾಡಿ ದೇಶದ ಭವಿಷ್ಯಕ್ಕೆ ಮಹಿಳೆಯರ ಕೊಡುಗೆ ಅಪಾರ ಎಂದರು.
ಒಕ್ಕಲಿಗ ಮಹಿಳಾ ಗೌಡ ಸೇವಾ ಸಂಘದ ಅಧ್ಯಕ್ಷೆ ವಾರಿಜಾ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳಾ ಸಂಘದ ಮೂಲಕ ಕೆಡ್ಡಸ ಆಚರಣೆಯ ಮೂಲಕ ಆರಂಭಗೊಂಡ ನಮ್ಮ ಕಾರ್ಯಕ್ರಮ ಮಹಿಳಾ ದಿನಾಚರಣೆಯ ಕನಸಿನ ಬೀಜ ಹುಟ್ಟಿತ್ತು. ಇವತ್ತು ಅದು ಯಶಸ್ವಿಯಾಗಿ ನಡೆದಿದೆ. ಪುರುಷರ ಪ್ರತಿ ಯಶಸ್ವಿ ಹಿಂದೆ ಮಹಿಳೆಯ ಪಾತ್ರ ಇದೆ ಎಂದು ಹೇಳುತ್ತಾರೆ. ಅದೆ ರೀತಿ ಪ್ರತಿ ಮಹಿಳೆಯ ಯಶಸ್ವಿಯ ಹಿಂದೆ ಪುರುಷರ ಪಾತ್ರವಿದೆ. ಇವತ್ತು ಮಹಿಳಾ ಸಂಘಟನೆಗೆ ಮಾತೃಸಂಘ ಪ್ರೋತ್ಸಾಹ ನೀಡಿದರಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಕಾರ್ಯಕ್ರಮ ನಿಮಿತ್ತ ಮಾತ್ರ ಸಂಘಟನೆಗೆ ಆದತ್ಯೆ ಕೊಡಬೇಕು. ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ ಮಾತೆಯರು ಮಕ್ಕಳಿಗೆ ಸಮಾಜದ ಆಚಾರ ವಿಚಾರ ಸಂಸ್ಕ್ರತಿಯನ್ನು ಮೈಗೂಡಿಸುವ ಕೆಲಸದ ಮೂಲಕ ಸಂಘಟನೆ ಬಲಗೊಳ್ಳಬೇಕೆಂದರು. ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಅವರು ಮಾತನಾಡಿ ಮಹಿಳೆಯರು ಜವಾಬ್ದಾದಾರಿಯನ್ನು ನಿಬಾಯಿಸುವಲ್ಲಿ ನಿಸ್ಸಿಮಾರು. ಅವರಿಗೆ ನಾವು ಬೆನ್ನೆಲುಬಾಗಿ ನಿಲ್ಲುವ ಮೂಲಕ ಅವರನ್ನು ನಾಯಕತ್ವಕ್ಕೆ ಪ್ರೋತ್ಸಾಹ ನೀಡಬೇಕೆಂದರು. ಮಹಿಳಾ ಗೌಡ ಸೇವಾ ಸಂಘದ ಗೌರವ ಸಲಹೆಗಾರ ಮೀನಾಕ್ಷಿ ಡಿ ಗೌಡ ಅವರು ಮಾತನಾಡಿ ಕಾಲ ಬದಲಾದಂತೆ ಮಹಿಳೆಯರು ಇವತ್ತು ಸ್ವಾವಲಂಭಿ ಸಾಧಕಿಯಾಗಿದ್ದಾರೆ. ಇದು ನಮಗೆ ಹೆಮ್ಮೆ ಅನಿಸುತ್ತಿದೆ ಎಂದರು.
ಸಾಧಕಿ ಮಹಿಳೆಗೆ ಗೌರವ:
ಯಶಸ್ವಿ ಉದ್ಯಮಿಯಾಗಿರುವ ಭಾರತ್ ಎಂಟರ್ ಪ್ರೈಸಸ್, ಭಾರತ್ ಪ್ಯೂಲ್, ಭಾರತ್ ಇಂಡಸ್ಟ್ರೀಸ್ ನ ಮಾಲಕಿ ಕೃಷ್ಣವೇಣಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವನಿತಾ ಬನ್ನೂರು ಸನ್ಮಾನಿತರನ್ನು ಪರಿಚಯಿಸಿದರು. ಮಹಿಳಾ ಗೌಡ ಸೇವಾ ಸಂಘದ ಕೋಶಾಧಿಕಾರಿ ರತ್ನಕಿಶೋರ್ ಬಹುಮಾನ ಕಾರ್ಯಕ್ರಮ ನಿರ್ವಹಿಸಿದರು. ಇದೆ ಸಂದರ್ಭ ತ್ರಿವೇಣಿ ದರ್ಬೆ ಅದೃಷ್ಟ ಮಹಿಳೆಯಾಗಿ ಆಯ್ಕೆಯಾದರು. ಸಂಘದ ಸಂಘಟನಾ ಕಾರ್ಯದರ್ಶಿ ಸುಮಲತಾ ಚಿಂತನಾ ಕಾರ್ಯಕ್ರಮ ನಡೆಸಿದರು. ಪ್ರಧಾನ ಕಾರ್ಯದರ್ಶಿ ಸಂದ್ಯಾಶಶಿಧರ್ ಅವರು ಅತಿಥಿಗಳನ್ನು ಗೌರವಿಸಿದರು.
ಮುಖ್ಯಗುರು ಜಲಜಾಕ್ಷಿ ಎ ಎಮ್, ಸಾವಿತ್ರಿ ಕೆ ಆರ್, ನಮಿತಾ, ತ್ರಿವೇಣಿ, ಉಷಾಮಣಿ, ರೇವತಿ, ರಾಜೀವಿ, ವಿದ್ಯಾ ಅತಿಥಿಗಳನ್ನು ಗೌರವಿಸಿದರು. ಪ್ರೇಮಲತಾ ನಂದಿಲ ಪ್ರಾರ್ಥಿಸಿದರು. ಮಹಿಳಾ ಗೌಡ ಸೇವಾ ಸಂಘ ಉಪಾಧ್ಯಕ್ಷೆ ನವೀನಾ ಡಿ ಸ್ವಾಗತಿಸಿದರು. ಕಾರ್ಯದರ್ಶಿ ವಿದ್ಯಾ ಲಿಂಗಪ್ಪ ವಂದಿಸಿದರು. ಸಂದ್ಯಾ ಬೈಲಾಡಿ ಮತ್ತು ಗೀತಾ ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ತಾಳಮದ್ದಳೆ:
ಕಾಳಬೈರವೇಶ್ವರ ಯಕ್ಷಗಾನ ತಾಳಮದ್ದಳೆ ಸಂಘದಿಂದ ಶ್ರೀರಾಮ ದರ್ಶನ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಭವ್ಯಶ್ರೀ ಕುಲ್ಕುಂದ, ಮದ್ದಳೆಯಲ್ಲಿ ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ಚೆಂಡೆಯಲ್ಲಿ ಶಿವಜಿತ್ ವೈ ಜೆ, ಚಕ್ರತಾಳದಲ್ಲಿ ಗಗನ್ ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರುತಿ ವಿಶ್ಮಿತ್ ಗೌಡ ( ಅರ್ಜುನ), ರೇಣುಕಾ ಗೌಡ(ಹನುಮಂತ), ರೇವತಿ ವಿಶ್ವನಾಥ ಗೌಡ ಪಟ್ಟೆ ( ರಾಮ), ರಾಜೀವಿ ನಾಗೇಶ್ ಗೌಡ ( ಕೃಷ್ಣ) ಸಹಕರಿಸಿದರು