ಹಿರಿಯ ನಾಟಿ ವೈದ್ಯೆ ವೆಂಕಮ್ಮ ಈಶ್ವರಮಂಗಲ, ದೈವನರ್ತಕರಾದ ಕರಿಯ ಅಜಿಲ ಕಡ್ಯ ರವರಿಗೆ ಜಾನಪದ ಪರಿಷತ್ತು ಪ್ರಶಸ್ತಿ

0

ಪುತ್ತೂರು: 2024 ನೇ ಜಿಲ್ಲಾಮಟ್ಟದಲ್ಲಿ ಕೊಡ ಮಾಡುವ ಜಾನಪದ ಪರಿಷತ್ತು ಪ್ರಶಸ್ತಿಯನ್ನು ಹಿರಿಯ ನಾಟಿ ವೈದ್ಯರಾದ ಪುತ್ತೂರು ತಾಲೂಕಿನ ವೆಂಕಮ್ಮ ಈಶ್ವರಮಂಗಲ ಮತ್ತು ದೈವನರ್ತಕರಾದ ಕರಿಯ ಅಜಿಲ ಕಡ್ಯ ರವರು ಪಡೆದುಕೊಂಡಿದ್ದಾರೆ.ಪಣಂಬೂರು ಬೀಚ್ ನಲ್ಲಿ ನಡೆದ ಜಾನಪದ ಕಡಲೋತ್ಸವ 2024 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಾನಪದ ಪ್ರಶಸ್ತಿಗೆ ಪುತ್ತೂರು ತಾಲೂಕು ಘಟಕ ದಿಂದ ಹಿರಿಯ ನಾಟಿ ವೈದ್ಯರಾದ ವೆಂಕಮ್ಮ ಈಶ್ವರಮಂಗಲ ಮತ್ತು ಹಿರಿಯ ದೈವನರ್ತಕ ಕರಿಯ ಅಜೀಲ ಕಡ್ಯ ರವರಿಗೆ ನೀಡಿ ಗೌರವಿಸಲಾಯಿತು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿರುವ ಗ್ರಾಮೀಣ ಪ್ರದೇಶಗಳಿಗೆ ಬೇಟಿ ನೀಡಿ ಇಂತಹ ಸಾಧಕರನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸಲಿದ್ದೇವೆ ಎಂದು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ, ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಡಾ.ರವೀಶ್ ಪಡುಮಲೆ,ಉಪಾಧ್ಯಕ್ಷರಾದ ಸುಧಾಕರ್ ಕುಲಾಲ್ , ಸಂಘಟನಾ ಕಾರ್ಯದರ್ಶಿಗಳಾದ ಗಿರೀಶ್ ರೈ, ಈಶ್ವರಮಂಗಲ ಕೋಶಾಧಿಕಾರಿಯಾದ ಗೋಪಾಲ ರವರು ಮತ್ತು ಸದಸ್ಯರಾದ ಅಚ್ಚುತ ಮಣಿಯಾಣಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here