ನೆಹರೂನಗರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ

0

ಪುತ್ತೂರು: ನೆಹರೂನಗರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ ನಡೆಯಿತು. ಬಾಲವಿಕಾಸ ಸಮಿತಿ ಅದ್ಯಕ್ಷೆ ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ದಿನೇಶ್ ಗೌಡ, ಶಿಶು ಅಭಿವೃದ್ಧಿ ಯೋಜನೆಯ ಕಬಕ ವಲಯ ಮೇಲ್ವಿಚಾರಕಿ ಸುಜಾತ ಎಸ್., ಮಂಜಲ್ಪಡ್ಪು ಬಿಇಎಮ್ ಹಿ.ಪ್ರಾ.ಶಾಲೆಯ ಮುಖ್ಯಗುರು ಶಿವನಂದಪ್ಪ, ಶಹರಿ ರೋಜ್‌ಗಾರ್ ಪ್ರತಿನಿಧಿ ಭಾರತಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ನಿವೃತ್ತ ಕೃಷಿ ಅಧಿಕಾರಿ ಪದ್ಮನಾಭ ಶೆಟ್ಟಿ, ರೋಟರಿ ಕ್ಲಬ್ ಪೂರ್ವದ ನವೀನ್ ಕುಮಾರ್ ಶೆಟ್ಟಿ, ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ರಮಾ ಸ್ವಾಗತಿಸಿ ವಂದಿಸಿದರು. ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಶಹರಿ ರೋಜ್‌ಗಾರ್ ಸದಸ್ಯರು ಉಪಸ್ಥಿತರಿದ್ದರು. ಕಲ್ಲೇಗ ವಿನೋದ್, ವಿನೋದ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಮೀನಾಕ್ಷಿ ಸಹಕರಿಸಿದರು.

LEAVE A REPLY

Please enter your comment!
Please enter your name here