ಪುತ್ತೂರು: ಎಸ್ ಪಿ ವೈ ಎಸ್ ಎಸ್ ಯೋಗ ಸಮಿತಿಯಿಂದ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಯೋಗ ಶಿವನಮಸ್ಕಾರ ಮತ್ತು ಶಿವಷ್ಟೋತ್ತರ ಶತನಾಮಾನಿ ಪಠಣೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ವತಿಯಿಂದ ಪ್ರಥಮ ಬಾರಿಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಮಾ.10ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನ ಅರ್ಚಕರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವೆಂಕಟೇಶ್ ಸುಬ್ರಹ್ಮಣ್ಯ ಭಟ್ ,ಜಿಲ್ಲಾ ಲೆಕ್ಕ ಪತ್ರ ಪ್ರಮುಖ ಶಿವಪ್ರಸಾದ್,ತಾಲೂಕು ಶಿಕ್ಷಣ ಪ್ರಮುಖ ಗಣೇಶ್, ಹಿರಿಯ ಶಿಕ್ಷಕ ಸುರೇಂದ್ರ, ವೀಣಾ, ನಗರ ಸಂಘಟನಾ ಪ್ರಮುಖರು ಇವರುಗಳ ಗೌರವ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ನಡೆಯಿತು.
ಭಜನೆ, ಹಾಗೂ 11 ಸುತ್ತಿನ ಏಕಾದಶ ರುದ್ರ ನಮಸ್ಕಾರ ಮತ್ತು ಶಿವಷ್ಟೋತ್ತರ ಶತನಾಮಾನಿ ಪಠಣೆ ನಡೆಯಿತು.ಸಮಿತಿಯ 400ಕ್ಕೂ ಮಿಕ್ಕಿದ ಯೋಗ ಬಂಧುಗಳು ಭಾಗವಹಿಸಿದರು.ಜಿಲ್ಲಾ ಪ್ರಮುಖ ಲೋಕೇಶ್ ,ಅನುಪಮಾ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸತೀಶ್ ಪ್ರಾರ್ಥಿಸಿ,ರೀತಾ ಸ್ವಾಗತಿಸಿ, ವೀಣಾ ವಂದಿಸಿ, ಶ್ರುತಿ ನಿರೂಪಿಸಿದರು .ಚಂದ್ರಾವತಿ ಶಿವಷ್ಟೋತ್ತರ ಶತನಾಮಾನಿ ಪಠಣೆಯನ್ನು ನಡೆಸಿದರು.
ತಾಲೂಕು ಸಂಚಾಲಕ ಯೋಗಿಶ್ ಆಚಾರ್ಯ ಮಾರ್ಗದರ್ಶನ ಮಾಡಿದರು.ಕೃಷ್ಣನಂದಾ, ಸುದೇಶ್, ಸುರೇಂದ್ರ, ಭಗವಾನ್ ದಾಸ್, ಸುಂದರ, ಶ್ರೀಧರ್, ಲಕ್ಷ್ಮೀಕಾಂತ್ , ಜನಾರ್ಧನ, ಸಂತೋಷ , ರಾಧಾಕೃಷ್ಣ ಶಾಂತಕುಮಾರ್ , ರಮೇಶ್, ಗೋಪಾಲಕೃಷ್ಣ, ಲಲಿತಾ, ಶಶಿಕಲಾ ಹಾಗೂ ಇತರರು ವ್ಯವಸ್ಥೆಗೆ ಸಹಕರಿಸಿದರು.