ಕರ್ವೇಲು: ಅಂಗನವಾಡಿಯ ಅಡುಗೆ ಕೋಣೆ ಉದ್ಘಾಟನೆ

0

ಉಪ್ಪಿನಂಗಡಿ: ಅಂಗನವಾಡಿಗಳು ಮಕ್ಕಳಿಗೆ ಸಂಸ್ಕಾರ- ಸಂಸ್ಕೃತಿ ನೀಡುವ ಕೇಂದ್ರಗಳಾಗಿದ್ದು, ಪ್ರಾರಂಭಿಕ ಹಂತದಲ್ಲೇ ಪುಟಾಣಿಗಳಿಗೆ ಉತ್ತಮ ಶಿಕ್ಷಣ ಲಭಿಸಿದಾಗ ಅವರ ಭವಿಷ್ಯ ಉತ್ತಮವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
34 ನೆಕ್ಕಿಲಾಡಿ ಗ್ರಾಮದ ಕರ್ವೇಲ್ ಅಂಗನವಾಡಿಯಲ್ಲಿ ಎರಡು ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಅಡುಗೆ ಕೋಣೆಯನ್ನು ಮಾ.11ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಈ ಅಂಗನವಾಡಿಗೆ ಅಡುಗೆ ಕೋಣೆ ನಿರ್ಮಾಣಕ್ಕಾಗಿ ಎರಡು ಲಕ್ಷ ರೂ. ಅನುದಾವನ್ನು ನೀಡಿದ್ದೇನೆ. ಮುಂದಿನ ಹಂತದಲ್ಲಿ ಇಲ್ಲಿಗೆ ಇನ್ನೂ ಅನುದಾನವನ್ನು ನೀಡಲಾಗುವುದು. ಅಂಗನವಾಡಿಗೆ ಅಗತ್ಯವಿರುವ ಬೇಡಿಕೆಗಳನ್ನು ಪಟ್ಟಿ ಮಾಡಿ ತಿಳಿಸಿ ಎಂದರು.
ಕಾರ್ಯಕ್ರಮದಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ನಝೀರ್ ಮಠ, 34 ನೆಕ್ಕಿಲಾಡಿ ವಲಯಾಧ್ಯಕ್ಷೆ ಅನಿ ಮಿನೇಜಸ್, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್, ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಆದರ್ಶನಗರ, ನವಾಝ್ ಕವೇಲು, ಕಾಂಗ್ರೆಸ್ ಮುಖಂಡರಾದ ಅಸ್ಕರ್ ಅಲಿ, ಶರೀಕ್ ಅರಪ್ಪಾ, ಮುಹಮ್ಮದ್ ಹುಸೈನ್, ಯಾಕೂಬ್, ಕಲಂದರ್, ನಾಸೀರ್, ಶರೀಫ್, ಅಂಗನವಾಡಿ ಪಾಲನಾ ಸಮಿತಿಯ ಅಧ್ಯಕ್ಷೆ ನಸೀಮಾ, ಅಂಗನವಾಡಿ ಸಹಾಯಕಿ ದೇವಕಿ ಮತ್ತಿತರರು ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸುಜಾತ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಜಾನಕಿ ವಂದಿಸಿದರು.

LEAVE A REPLY

Please enter your comment!
Please enter your name here