ಪುತ್ತೂರು: ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಅಗರ್ತಬೈಲು ಬಳಕ್ಕ ಬಂಗೇರ ಕುಟುಂಬದ ತರವಾಡು ಮನೆಯ ದೈವಸ್ಥಾನದಲ್ಲಿ ದೈವಗಳ ಪ್ರತಿಷ್ಠಾ ದಿನಾಚರಣೆ ಹಾಗೂ ದೈವಗಳ ವಾರ್ಷಿಕ ನೇಮೋತ್ಸವ ಮಾ.15 ರಿಂದ 17ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.15ರಂದು ಬೆಳಿಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ ನಾಗತಂಬಿಲ ವೆಂಕಟ್ರಮಣ ದೇವರ ಹರಿಸೇವೆ ದೈವಗಳಿಗೆ ತಂಬಿಲ ಸೇವೆ ನಡೆದು ಸತ್ಯನಾರಾಯಣ ಪೂಜೆ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ದೈವಗಳ ಭಂಡಾರ ತೆಗೆದು ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ಕೊರತಿ ಹಾಗೂ ರಾಹುಗುಳಿಗ ನೇಮೊತ್ಸವ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಮಾ.16ರಂದು ಸಾಯಂಕಾಲ ದೈವಗಳ ಭಂಡಾರ ತೆಗೆದು ಅನ್ನ ಸಂತರ್ಪಣೆ ನಡೆದು ಸತ್ಯದೇವತೆ ವರ್ಣರ ಪಂಜುರ್ಲಿ ಕಲಾಲ್ತಗುಳಿಗ ನೇಮೋತ್ಸವ ನಡೆಯಲಿದೆ.
ಮಾ.17ರಂದು ಬೆಳಿಗ್ಗೆ ಧರ್ಮದೈವದ ಭಂಡಾರ ತೆಗೆದು ಧರ್ಮದೈವ ಧೂಮಾವತಿ ದೈವದ ನೇಮೋತ್ಸವ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ ದೈವಗಳಿಗೆ ತಂಬಿಲ ಸೇವೆ ನಡೆದು ರಾತ್ರಿ ಕೊರಗಜ್ಜ ದೈವದ ನೇಮೋತ್ಸವ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ ಗಂಟೆ 9:00 ರಿಂದ ಪೆನ್ಸಿಲ್ ಬಾಕ್ಸ್ ಚಲನ ಚಿತ್ರ ಪ್ರದರ್ಶನ ನಡೆಯಲಿದೆ ಎಂದು ಬಳಕ್ಕ ಬಂಗೇರ ತರವಾಡು ಮನೆಯ ಕುಟುಂಬಸ್ಥರು ತಿಳಿಸಿದ್ದಾರೆ.