ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಪ್ರತಿಷ್ಠಾವರ್ಧಂತಿ ಉತ್ಸವದ ಅಂಗವಾಗಿ ಮುಂಜಾನೆ ಶ್ರೀ ದೇವರಿಗೆ ಮಹಾಪಂಚಾಮೃತ ಅಭಿಷೇಕ, ನರಸಿಂಹ ಹವನ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀ ದೇವರ ಪೇಟೆ ಸವಾರಿ ಉತ್ಸವ ಮಾ.14ರಂದು ವಿಜೃಂಭಣೆಯಿಂದ ಜರಗಿತು.
ಈ ಸಂದರ್ಭ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಬೇಕಲ್ ಗಣೇಶ ಶೆಣೈ, ಮೊಕ್ತೇಸರರಾದ ಕೆ.ಅನಂತರಾಯಕಿಣಿ, ಯು.ನಾಗರಾಜ ಭಟ್, ಕೆ.ದೇವಿದಾಸ ಭಟ್, ಡಾ.ಎಂ.ಆರ್. ಶೆಣೈ ಪ್ರಮುಖರಾದ ಎಚ್.ವಾಸುದೇವ ಪ್ರಭು, ಕೆ.ಗಣೇಶ್ ಭಟ್, ಕೆ.ಸತೀಶ ಕಿಣಿ, ಕರಾಯ ಗಿರೀಶ್ ನಾಯಕ್, ಎಂ. ಶ್ರೀನಿವಾಸ ಭಟ್ ಲಕ್ಷ್ಮೀನಗರ, ಯಂ.ಮಂಜುಳೇಶ್ ಭಟ್, ಪಣಕಜೆ ಪ್ರಸಾದ ಶೆಣೈ, ಗಿರಿಧರ್ ನಾಯಕ್, ಕರಾಯ ರಾಘವೇಂದ್ರ ನಾಯಕ್, ರಾಜೇಶ್ ಪೈ, ಬಿ. ವಿದ್ಯಾಧರ ಮಲ್ಯ, ಪ್ರಾಣೇಶ್ ಶೆಣೈ, ಅಶ್ವಿನ್ ಕಿಣಿ, ಕೆ.ಹರೀಶ ಕಿಣಿ, ಕೆ.ವೆಂಕಟೇಶ್ ಕಿಣಿ, ಹರೀಶ ಪೈ, ವೈ.ವೆಂಕಟೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಅರ್ಚಕರಾದ ಸುಬ್ರಹ್ಮಣ್ಯ ಭಟ್, ರವೀಂದ್ರ ಭಟ್, ಸಂದೀಪ್ ಭಟ್, ಶ್ರೀಧರ್ ಭಟ್ ಪೂಜಾ ವಿಧಿ- ವಿಧಾನಗಳನ್ನು ನಡೆಸಿಕೊಟ್ಟರು.
ಪೋಟೋ: ಟೆಂಪಲ್