ಕೌಡಿಚ್ಚಾರ್: ಅರಿಯಡ್ಕ ಗ್ರಾ.ಪಂ.ಸಾಮಾನ್ಯ ಸಭೆ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಶಿವರಾಂ ಎಂ.ಅವರು ಗತ ಸಭೆ ವರದಿ ಮಂಡಿಸುತ್ತಿದ್ದಂತೆ ಸದಸ್ಯರಾದ ಮೋನಪ್ಪ ಪೂಜಾರಿ ಕೆರಮಾರು., ಜಯಂತಿ ಅವರು ಮಾತನಾಡಿ, ಸದಸ್ಯರಿಗೆ ಗತ ಸಭೆಯ ನಿರ್ಣಯದ ಪ್ರತಿಯನ್ನು ನೀಡಿ ಸಭೆ ಮುಂದುವರಿಸುವಂತೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಜಗದೀಶ್ ಅವರು, ನಿರ್ಣಯಕ್ಕೆ ಅಧ್ಯಕ್ಷರ ಸಹಿ ಆಗಲು ಬಾಕಿ ಇದೆ ಎಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಕಚೇರಿಗೆ ಬಂದಾಗ ಪಿಡಿಒರವರು ಇಲ್ಲದೇ ಇದ್ದ ಇರದ ಕಾರಣ ಸಹಿ ಬಾಕಿ ಆಗಿದೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಈ ವೇಳೆ ಮಾತನಾಡಿದ ಸದಸ್ಯ ಹರೀಶ್ ರೈ ಜಾರತ್ತಾರು ಅವರು, ಇದೊಂದು ಗಂಭೀರ ವಿಚಾರವಾಗಿದೆ. ಮುಂದೆ ಈ ರೀತಿಯಾಗದಂತೆ ಅಧ್ಯಕ್ಷರು, ಪಿಡಿಒ ಅವರು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಇದಕ್ಕೆ ಪಿಡಿಒ ಜಗದೀಶ್ ಅವರು ಸಮ್ಮತಿ ಸೂಚಿಸಿದ ಬಳಿಕ ಸಭೆ ಮುಂದುವರಿಯಿತು. ಜಲ ಜೀವನ್ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು ಎಲ್ಲಾ ಮನೆಗಳಿಗೆ ಮೀಟರ್ ಅಳವಡಿಸಿ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧ್ಯಕ್ಷ ಸಂತೋಷ್ ಮಣಿಯಾಣಿ ಅವರು ತಿಳಿಸಿದರು. ಮನೆ, ಅಂಗಡಿ ಕಟ್ಟಡಗಳಿಗೆ ಪರವಾನಿಗೆ ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಸದಸ್ಯರಾದ ಸದಾನಂದ ಮಣಿಯಾಣಿ, ನಾರಾಯಣ ಚಾಕೋಟೆ, ಹರೀಶ್ ರೈ ಜಾರತ್ತಾರು, ಲೋಕೇಶ್ ಚಾಕೋಟೆಕಾವು, ಮೋನಪ್ಪ ಪೂಜಾರಿ ಕೆರೆಮಾರು, ಅಜಿತ್ ಕೆರೆಮಾರು, ದಿವ್ಯನಾಥ ಶೆಟ್ಟಿ ಕಾವು, ಪ್ರವೀಣ ಎ.ಬಿ, ಸೆಲ್ಮಾ ಅಮ್ಚಿನಡ್ಕ, ಸಾವಿತ್ರಿ ಪೊನ್ನತ್ತಳ್ಕ, ಭಾರತಿ ವಸಂತ, ಪುಷ್ಪಲತಾ ಮರತ್ತಮೂಲೆ, ಉಷಾರೇಖಾ ರೈ, ಹೇಮಾವತಿ ಚಾಕೋಟೆ, ಸೌಮ್ಯ ಬಾಲಸುಬ್ರಹ್ಮಣ್ಯ, ಅನಿತಾ ಆಚಾರಿಮೂಲೆ, ಜಯಂತಿ ಸಭೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಯೋಗೀಶ್ ಕುಲಾಲ್, ಪ್ರಭಾಕರ, ಶಶಿಕುಮಾರ್ ಸಹಕರಿಸಿದರು.