ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳವಿಗೆ ಯತ್ನ !

0

ಬಾಗಿಲು ಮುರಿದು ಕಾಂಡೋಮ್‌ಗಳನ್ನು ಚೆಲ್ಲಾಡಿ, ಜಗಲಿಯಲ್ಲಿ ಗಲೀಜು ಮಾಡಿದ ಕಿಡಿಗೇಡಿಗಳು

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ನೆಲ್ಲಿಕಟ್ಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಕಳವಾಗಿ 8 ತಿಂಗಳ ಬಳಿಕ ಇದೀಗ ಮತ್ತೊಮ್ಮೆ ಆರೋಗ್ಯ ಕೇಂದ್ರದಲ್ಲಿ ಕಳವಿಗೆ ಯತ್ನ ನಡೆದಿದ್ದು, ಆರೋಗ್ಯ ಕೇಂದ್ರದ ಬಾಗಿಲ ಬೀಗ ಮುರಿದು, ಜಗಲಿಯಲ್ಲಿ ಕಾಂಡೋಮ್‌ಗಳನ್ನು ಚೆಲ್ಲಾಡಿ ಗಲೀಜು ಮಾಡಿದ ಘಟನೆ ಮಾ.16ರಂದು ಬೆಳಕಿಗೆ ಬಂದಿದೆ.

2023ರ ಜು.30ರಂದು ಹೊಸ ಸಿ.ಸಿ ಕ್ಯಾಮರ ಕಳವಾದ ಮೊದಲು ಹಳೆ ಸಿಸಿ ಕ್ಯಾಮರ ಕಳವಾಗಿತ್ತು. ಈ ಕುರಿತು ಈ ಕುರಿತು ಆರೋಗ್ಯ ಕೇಂದ್ರದವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡುವಂತೆ ಸಲಹೆ ನೀಡಿದ್ದರು. ಅದಾದ ಬಳಿಕ ಮತ್ತೊಮ್ಮೆ ಸಿಸಿ ಟಿವಿ ಕಳವಾದಾಗಲೂ ಪೊಲೀಸರು ಖಾಸಗಿ ದೂರು ನೀಡುವಂತೆ ತಿಳಿಸಿದ್ದರು. ಇದೀಗ 8 ತಿಂಗಳ ಬಳಿಕ ಕಿಡಿಗೇಡಿಗಳು ಆರೋಗ್ಯ ಕೇಂದ್ರದ ಬಾಗಿಲ ಬೀಗ ಮುರಿದು ಒಳಗಡೆ ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೊರಗಡೆ ಜಗಲಿಯಲ್ಲಿ ಕಾಂಡೋಮ್‌ಗಳನ್ನು ಚೆಲ್ಲಿ, ಗಲೀಜು ಮಾಡಿದ್ದಾರೆ. ತಿಂಗಳ ಹಿಂದೆಯಷ್ಟೆ ಅದೇ ವಠಾರದಲ್ಲಿರುವ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಪೈಪ್ ಅನ್ನು ಕೂಡಾ ಕಿಡಿಗೇಡಿಗಳು ಹಾನಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ನೋಡಿದಾಗ ಪೊಲೀಸರು ರಾತ್ರಿ ಸಮಯ ಗಸ್ತು ತಿರುಗುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here