ಕುಂಬ್ರ: ಶೇಖಮಲೆಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ, ತಪ್ಪಿದ ಅನಾಹುತ…!

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬ್ರದ ಶೇಖಮಲೆ ಸಮೀಪ ಬೃಹತ್ ಗಾತ್ರದ ಧೂಪದ ಮರವೊಂದು ಬುಡದಿಂದ ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಮಾ.22 ರಂದು ಮಧ್ಯಾಹ್ನ ನಡೆದಿದೆ.

ಮರ ಬೀಳುವ ಸಂದರ್ಭದಲ್ಲಿ ಯಾವುದೇ ವಾಹನಗಳ ಸಂಚಾರ ಇಲ್ಲದೇ ಇದ್ದುದರಿಂದ ಅನಾಹುತವೊಂದು ತಪ್ಪಿದೆ ಎನ್ನಲಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು ಸುಮಾರು ಅರ್ಧ ಕಿ.ಮೀ ತನಕ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಸ್ಥಳೀಯರಾದ ಸಂಶುದ್ದೀನ್ ಕುಂಬ್ರ ಮತ್ತು ಈಚು ಮುಡಾಲರವರು ಮೆಷಿನ್ ಮೂಲಕ ಮರವನ್ನು ಕತ್ತರಿಸಿ ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.


ಇನ್ನೊಂದು ಅಪಾಯಕಾರಿ ಮರವಿದೆ
ಬುಡಸಮೇತ ಮುರಿದು ಬಿದ್ದ ಧೂಪದ ಮರದ ಪಕ್ಕದಲ್ಲೇ ಇನ್ನೊಂದು ಅಪಾಯಕಾರಿಯಾದ ಬೃಹತ್ ಗಾತ್ರದ ಮರವಿದೆ. ಈ ಮರವೂ ಕೂಡ ಬೀಳುವ ಸ್ಥಿತಿಯಲ್ಲಿದೆ. ವಾಹನ ಸಂಚಾರದ ಸಮಯದಲ್ಲಿ ಮರ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಆದ್ದರಿಂದ ಅರಣ್ಯ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಮರವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here