ಮಾ.28:ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಚಾರ್ಟರ್ ಸನದು ಪ್ರದಾನ, ಪದಪ್ರದಾನ

0

ಪುತ್ತೂರು:ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪ್ರಾಯೋಜಕತ್ವದಲ್ಲಿ ಪುತ್ತೂರಿನ ಎಂಟನೇ ಕ್ಲಬ್ ಎನಿಸಿದ ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಇದರ ಚಾರ್ಟರ್ ಸನದು ಪ್ರದಾನ ಹಾಗೂ ಪದಪ್ರದಾನ ಸಮಾರಂಭವು ಮಾ.28 ರಂದು ಮರೀಲು ಹೊರ ವಲಯದಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ ಸಂಜೆ ಜರಗಲಿದೆ.


ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್‌ರವರು ನೂತನ ಕ್ಲಬ್‌ಗೆ ಚಾರ್ಟರ್ ಸನದು ಪ್ರದಾನ ಹಾಗೂ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಗೌರವ ಅತಿಥಿಗಳಾಗಿ ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ಜಿಲ್ಲಾ ಗವರ್ನರ್ ನಾಮಿನಿ ರಾಮಕೃಷ್ಣ ಪಿ.ಕೆ, ಎ.ಆರ್.ಸಿ ರಂಗನಾಥ್ ಭಟ್, ಎ.ಆರ್.ಪಿ.ಐ.ಸಿ ಅಭಿನಂದನ್ ಶೆಟ್ಟಿ, ಎ.ಆರ್.ಆರ್.ಎಫ್.ಸಿ ಕೃಷ್ಣ ಶೆಟ್ಟಿ, ಡಿಆರ್‌ಎಫ್‌ಸಿ ಡಾ.ಸೂರ‍್ಯನಾರಾಯಣ, ರೋಟರಿ ೩೧೮೦ರ ಪಿಡಿಜಿ ಡಾ.ಭಾಸ್ಕರ್ ಎಸ್, ಕ್ಲಬ್ ಎಕ್ಸ್ಟೆಂಶನ್ ಚೇರ್‌ಮ್ಯಾನ್ ಡಾ.ಶಿವಪ್ರಸಾದ್ ಕೆ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡೆಸಿಗ್ನೇಟ್ ವಿನಯ ಕುಮಾರ್‌ರವರು ಭಾಗವಹಿಸಲಿದ್ದಾರೆ .


28ಸದಸ್ಯರು:
ನೂತನ ಕ್ಲಬ್‌ನಲ್ಲಿ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಾರ್ಯದರ್ಶಿ ಎಸ್.ದಾಮೋದರ್ ಪಾಟಾಳಿರವರಲ್ಲದೆ ಸ್ವಾತಿ ಜೆ.ರೈ, ನಿತಿನ್ ಪಕ್ಕಳ, ಅಭಿಷೇಕ್ ಬೆಳ್ಳಿಪ್ಪಾಡಿ, ಆರ್ಶದ್ ದರ್ಬೆ, ಬಾಲಕೃಷ್ಣ ಪೊರ್ದಾಲ್, ಜಯಪ್ರಸಾದ್ ರೈ, ಪುರುಷೋತ್ತಮ್ ಪ್ರಭು, ರಾಕೇಶ್ ರೈ, ರಂಜಿನಿ ರೈ, ರಂಜಿತ್ ಬಂಗೇರ, ರಿಯಾಝ್ ಪರ್ಲಡ್ಕ, ಶಿಯಾನ್ ದರ್ಬೆ, ಸನ್ಮಿತ್ ರೈ, ವಂದನಾ ಶರತ್, ಚೇತನ್ ಉಪ್ಪಳಿಗೆ, ಅಭಿಜಿತ್ ಶೆಟ್ಟಿ, ರುಕ್ಮಯ್ಯ, ಡಾ.ಶರನ್ ಆಳ್ವ, ಸಂದೀಪ್ ರೈ ಚಿಲ್ಮೆತ್ತಾರು, ಜಯರಾಜ್ ರೈ, ಸರ್ವೇಶ್ ಯು.ಆರ್.ಎಸ್, ಪ್ರಣಾಮ್ ರೈ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಅಭಿಷೇಕ್ ಆನಂದ್ ರೈ, ಸನತ್ ರೈ ಉಳತ್ತಡ್ಕ, ಅನಿಕೇತ್ ಕಾಮತ್‌ರವರು ಸದಸ್ಯರಾಗಿರುತ್ತಾರೆ ಎಂದು ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಾರ್ಯದರ್ಶಿ ದಾಮೋದರ್ ಪಾಟಾಳಿ, ಕ್ಲಬ್ ಮೆಂಟರ್ ಕೆ.ವಿಶ್ವಾಸ್ ಶೆಣೈ, ನೂತನ ಕ್ಲಬ್ ಪ್ರಾಯೋಜಕತ್ವ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಕಾರ್ಯದರ್ಶಿ ರವಿಕುಮಾರ್ ರೈ, ಕ್ಲಬ್ ಮಾರ್ಗದರ್ಶಕ ಶರತ್ ಕುಮಾರ್ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲ ಉಳಿಸಿ ಆಂದೋಲನ..
ನೀರಿಲ್ಲದೆ ಜೀವನವಿಲ್ಲ-ನೀರಿದ್ದರೆ ನಾಳೆ ಇದೆ-ನೀರು ಜೀವನದ ಮೂಲವಾಗಿದೆ-ಕುಡಿಯುವ ನೀರನ್ನು ಇತರ ಉಪಯೋಗಗಳಿಗೆ ನಿಷೇಧಿಸಿ-ಹನಿ ನೀರು ಹಾನಿಯಾಗದಂತೆ ರಕ್ಷಿಸಿ-ಬೇಸಿಗೆ ಬಿಸಿಲ ಬೇಗೆ ಹೆಚ್ಚಾಗಿದೆ, ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದೆ-ನೀರು ಪೋಲಾಗದಂತೆ ಸಂರಕ್ಷಿಸೋಣ-ನೀರು ಭೂಮಿಯ ರಕ್ತ, ಅದನ್ನು ಚೆಲ್ಲದಿರಿ-ಜಲದಿಂದ ಮನುಜ ಕುಲ-ಜಲವೇ ಜೀವ ಸಂಕುಲ-ಹನಿ ನೀರನ್ನು ಉಳಿಸಿ ಜೀವಜಲವನ್ನು ರಕ್ಷಿಸಿ ಹೀಗೆ ನೂತನ ಕ್ಲಬ್ ‘ಜಲ ಉಳಿಸಿ’ ಬೃಹತ್ ಆಂದೋಲನವನ್ನು ನೂತನ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವರವರ ನೇತೃತ್ವದಲ್ಲಿ ಪುತ್ತೂರಿನಾದ್ಯಂತ ಈ ಜಾಗೃತಿಯನ್ನು ಕೈಗೆತ್ತಿಗೊಂಡಿದೆ.

ಬಿರುಮಲೆ ಬೆಟ್ಟದ ಅಭಿವೃದ್ಧಿ..
ನೂತನ ಕ್ಲಬ್ ಶಾಸಕ ಅಶೋಕ್ ಕುಮಾರ್ ರೈ, ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ಪುತ್ತೂರಿನ ಪ್ರವಾಸಿತಾಣವಾದ ಬಿರುಮಲೆ ಬೆಟ್ಟದ ಅಭಿವೃದ್ಧಿಯನ್ನು ನೂತನ ಕ್ಲಬ್ ಅಭಿವೃದ್ಧಿಗೊಳಿಸಲು ಪ್ರಯತ್ನಪಡಲಿದ್ದು ಇದಕ್ಕೆ ಪ್ರತಿಯೋರ್ವ ನಾಗರಿಕರು ತಮ್ಮೊಂದಿಗೆ ಸಹಕರಿಸಬೇಕು ಎಂದು ನೂತನ ಕ್ಲಬ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here