ಪುತ್ತೂರು: ನೆಹರೂನಗರದ ಕಾಡು ಬಳಗದ ವತಿಯಿಂದ ವಿವೇಕಾನಂದ ಇಂಜೀನಿಯರಿಂಗ್ ಕಾಲೇಜಿನ ಮುಂಭಾಗದ ಕಾಡು ಬಯಲು ರಂಗ ಮಂದಿರದಲ್ಲಿ ಯಕ್ಷ ರಂಗಾಯಣ ಕಾರ್ಕಳದ ನುರಿತ ಕಲಾವಿದರಿಂದ ಎರಡು ನಾಟಕಗಳು ನಡೆಯಲಿದೆ .
ಡಿ.15 ರಂದು ಸಂಜೆ 7 ರಿಂದ ಬಿ.ಎಂ.ವೆಂಕಟರಮಣ ಐತಾಳ ಇವರ ನಿರ್ದೇಶನದ ’ಗುಲಾಮನ ಸ್ವಾತಂತ್ರ್ಯ ಯಾತ್ರೆ’ ಮತ್ತು ಡಿ.16 ರಂದು ಮಂಗಳವಾರ ಸಂಜೆ 7 ರಿಂದ ಶ್ರೀಕಾಂತ್ ಎನ್.ವಿ. ನಿರ್ದೇಶನದ ,ಮಹಾತ್ಮರ ಬರವಿಗಾಗಿ, ನಾಟಕಗಳು ನಡೆಯಲಿದೆ. ಪ್ರವೇಶದರ ಒಬ್ಬರಿಗೆ ರೂ 100/-ವಿದ್ಯಾರ್ಥಿಗಳಿಗೆ ರೂ 50/-,ಊಟದ ವ್ಯವಸ್ಥೆಯಿದೆ. ಕಲಾಸಕ್ತರು ಆಗಮಿಸುವಂತೆ ಕಾರ್ಯಕ್ರಮದ ಆಯೋಜಕರಾದ ರಾಘವೇಂದ್ರ ಎಚ್.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
