ಪುತ್ತೂರು: ಕಳೆದ 20 ವರುಷಗಳಿಂದ ವಿವಿಧ ರಾಜ್ಯಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಪ್ರಸಿದ್ಧಿ ಪಡೆದಿರುವ ಅಪೊಲೊ ಸರ್ಕಸ್ ಮಾ.30 ರಿಂದ ದರ್ಬೆ ಬಳಿಯ ಮುಕ್ರಂಪಾಡಿಯ ಹನುಮಾನ್ ವಿಹಾರ ಮೈದಾನದಲ್ಲಿ ಆರಂಭಗೊಳ್ಳಲಿದೆ.
ಮಣಿಪುರಿ, ನೇಪಾಳ, ಅಸಾಮಿ, ಡಾರ್ಜಿಲಿಂಗ್ ಸೇರಿದಂತೆ ಇನ್ನಿತರ ಕಡೆಗಳ ನೂರಕ್ಕಿಂತ ಅಧಿಕ ಮಹಿಳೆಯರು ಹಾಗೂ ಪುರುಷ ಕಲಾವಿಧರು ಈ ತಂಡದಲ್ಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಲರ್ ಲೈಟ್ಸ್ ನಲ್ಲಿ ವಿವಿಧ ಪ್ರದರ್ಶನಗಳು ಸುಮಾರು ಎರಡು ಗಂಟೆಗಳ ಕಾಲ ನಡೆಯಲಿದ್ದು,ದಿನದಲ್ಲಿ ಮೂರು ಶೋ ನಡೆಯಲಿದೆ. ಇದೀಗಾಗಲೇ ತಂಡವು ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮಾ.30 ರಿಂದ ಪ್ರದರ್ಶಣ ಆರಂಭಗೊಳ್ಳಲಿದೆ ಎಂದು ತಂಡದ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.