ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮೆತ್ತಡ್ಕ ಶಾಲೆಗೆ ರೂ.50 ಸಾವಿರ ಅನುದಾನ

0

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಲಾ ದುರಸ್ಥಿ ಯೋಜನೆಯಡಿಯಲ್ಲಿ ಸಾಮೆತ್ತಡ್ಕ ಹಿ.ಪ್ರಾ ಶಾಲೆಗೆ ರೂ.50,000 ಅನುದಾನ ಮಂಜೂರಾಗಿದೆ.
ಮಂಜೂರಾತಿ ಪತ್ರವನ್ನು ಶಾಲಾ ಮುಖ್ಯಗುರು ಮರಿಯ ಅಶ್ರಫ್‌ರವರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಅಧ್ಯಕ್ಷ ಲೋಕೆಶ್ ಹೆಗ್ಡೆ, ವಲಯ ಅಧ್ಯಕ್ಷರು ಸತೀಶ್ ನಾಯ್ಕ್ ಧರ್ಮಸ್ಥಳ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್, ಮೇಲ್ವಿಚಾರಕಿ ಶೃತಿ, ಸೇವಾ ಪ್ರತಿನಿಧಿ ರಜನಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಾಮೆತಡ್ಕ ಒಕ್ಕೂಟ ಪ್ರತಿನಿಧಿ ಅಹಲ್ಯ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here