ಎಫ್.ಎಂ.ಬಿ ನಕ್ಷೆ ನೀಡಲು ಜನರನ್ನು ಅಲೆದಾಡಿಸುತ್ತಿರುವ ಸರ್ವೆ ಇಲಾಖೆ – ದೂರು

0

ಪುತ್ತೂರು: ನಕ್ಷೆಗಳಿಗಾಗಿ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದರೂ ಲಂಚ ನೀಡದ ಅರ್ಜಿದಾರರನ್ನು ನಕ್ಷೆ ನೀಡದೆ ತಿಂಗಳು ಗಟ್ಟಲೆ ಅಲೆದಾಡಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವ ಬಗ್ಗೆ ಜಿಲ್ಲಾ ಉಪನಿರ್ದೇಶಕರು ಭೂಮಾಪನಾ ಇಲಾಖೆ ಇಲ್ಲಿಗೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ದೂರು ನೀಡಲಾಗಿದೆ. ಹಲವಾರು ಕಾರಣಗಳಿಗಾಗಿ ಎಫ್.ಎಂ.ಬಿ ನಕ್ಷೆ ಅವಶ್ಯಕವಿರುತ್ತದೆ. ಜನರನ್ನು ಸತಾಯಿಸುತ್ತಿರುವವರ ಬಗ್ಗೆ ದೂರು ನೀಡಲು ಸರಕಾರ ಈ ಕಚೇರಿಯಲ್ಲಿ ಸಹಾಯವಾಣಿ ಸಂಖ್ಯೆಯನ್ನು ಕೂಡ ನಾಮಫಲಕದಲ್ಲಿ ಪ್ರಕಟಿಸಿರುತ್ತಾರೆ. ಆದರೆ ಇದಾವುದನ್ನೂ ಲೆಕ್ಕಿಸದ ಈ ಕಛೇರಿ ಪ್ರಾಮಾಣಿಕ ಅರ್ಜಿದಾರರಿಗೆ ತೊಂದರೆ ಕೊಡುತ್ತಿದೆ. ಮಧ್ಯವರ್ತಿಗಳಿಗೆ ಲಂಚದ ಆಮಿಷ ತೋರಿಸಿದವರಿಗೆ ಕೂಡಲೇ ನಕ್ಷೆಗಳು ದೊರಕುತ್ತಿದೆ. ಜನಸಾಮಾನ್ಯರ ಅರ್ಜಿಗಳನ್ನೇ ಇಲ್ಲದಂತೆ ಮಾಡಿ ಬೇರೆ ಬೇರೆ ರೀತಿ ತೊಂದರೆಗಳು ಈ ಕಚೇರಿಯಲ್ಲಿ ಉಂಟಾಗುತ್ತಿದೆ. ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ವಹಿಸಿ ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ವಿನಂತಿಸಿದೆ.

LEAVE A REPLY

Please enter your comment!
Please enter your name here