ಪುತ್ತೂರು: ಕೆನರಾ ಬ್ಯಾಂಕ್ ನ ಪುತ್ತೂರು ಪ್ರಾದೇಶಿಕ ಕಚೇರಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದ ಸಂಪ್ಯದಮೂಲೆ ನಾರಾಯಣ ರೈ ಬಿ. ಅವರು ಮಾ.30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಅವರು 1987ರಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗುಂಡಳ್ಳಿ ಶಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಕಾರವಾರ ಶಾಖೆಗೆ ವರ್ಗಾವಣೆಗೊಂಡ ಇವರು ಅಲ್ಲಿಂದ ಪದೋನ್ನತಿ ಹೊಂದಿ, ತಿರುವನಂತಪುರಂ, ಎರ್ನಕುಲಮ್, ಕಾರ್ಕಳದ ಮುಖ್ಯ ಶಾಖೆ, ಮುನಿಯಾಲು, ಕುಂಬಳೆ ಶಾಖೆಗೆ ವರ್ಗಾವಣೆಗೊಂಡು ಅಲ್ಲಿ ಪದೋನ್ನತಿ ಹೊಂದಿ ವರ್ಕಾಡಿ, ಪುತ್ತೂರಿನ ಎ.ಪಿ.ಎಂ.ಸಿ. ಶಾಖೆಗೆ, ಅಲ್ಲಿಂದ ಪದೋನ್ನತಿಗೊಂಡು ವಿಟ್ಲ, ದೇರಳಕಟ್ಟೆ ಶಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೇ ಸಮಯದಲ್ಲಿ ಕೆನರಾ ಬ್ಯಾಂಕ್ ಜೊತೆಗೆ ಸಿಂಡಿಕೇಟ್ ಬ್ಯಾಂಕ್ ವಿಲೀನಗೊಂಡಿತ್ತು. ನಂತರ ಕೆನರಾ ಬ್ಯಾಂಕ್ ನ ಎ.ಆರ್.ಎಂ.ಬಿ.ಶಾಖೆ ಮಂಗಳೂರು, ಕೊಟ್ಟಾರ ಅಲ್ಲಿಂದ ವರ್ಗಾವಣೆಗೊಂಡು ಪುತ್ತೂರಿನ ಕೆನರಾ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯನ್ನು ಹೊಂದಿದರು. ಇವರು ಬ್ಯಾಕಿಂಗ್ ಕೇತ್ರದಲ್ಲಿ ಒಟ್ಟು 37 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ.
ಪ್ರಸ್ತುತ ನಾರಾಯಣ ರೈ ಬಿ. ರವರು ತಮ್ಮ ಪತ್ನಿ ಸಂಧ್ಯಾ ರೈ ಹಾಗೂ ಮಕ್ಕಳಾದ ವರ್ಷಾ ಮತ್ತು ಶ್ರಾವ್ಯ ರವರೊಂದಿಗೆ ಪುತ್ತೂರಿನ ಸಾಮೆತಡ್ಕದಲ್ಲಿ ವಾಸವಾಗಿದ್ದಾರೆ.