ಶಿಬಿರಾರ್ಥಿಗಳಿಗೆ ಕಡಮಜಲು ಸುಭಾಷ್‌ ರೈಯವರಿಂದ ಕೃಷಿ ಮಾಹಿತಿ

0

ಪುತ್ತೂರು:ಬೆಳ್ಳಾರೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಒಂದು ಭಾಗವಾಗಿ ಶಿಬಿರಾರ್ಥಿಗಳಿಗೆ ಕೃಷಿ ಕ್ಷೇತ್ರದ ದರ್ಶನವನ್ನು ಕಡಮಜಲು ಸುಭಾಷ್‌ ರೈ ʼಸಿರಿ ಕಡಮಜಲು ಕೃಷಿ ಕ್ಷೇತ್ರದಲ್ಲಿʼ ಕಾರ್ಯಕ್ರಮ ಮಾ.29ರಂದು ಹಮ್ಮಿಕೊಳ್ಳಲಾಯಿತು.


ಇತಿಹಾಸ ವಿಭಾಗದ ಉಪನ್ಯಾಸಕಿ ಸುಮಲತಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಉಪನ್ಯಾಸಕಿ ಹರ್ಷಿತ ಕೆ ಎಸ್ ,ಪುಷ್ಪ ಹಾಗೂ ಸಿಬ್ಬಂದಿ ಭವ್ಯ ಅವರು ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿ ಹಾಗೂ ಕೃಷಿ ಕ್ಷೇತ್ರದ ಪಾಲಕ ಹಾಗೂ ಮಾಲಕರಾದ ಸುಭಾಷ್ ರೈ ಅವರು ವಿದ್ಯಾರ್ಥಿಗಳಿಗೆ ತಮ್ಮ ಕೃಷಿ ಅನುಭವ ಕೃಷಿ ಕ್ಷೇತ್ರದ ಸವಾಲುಗಳು ಹಾಗೂ ತಾವು ಉನ್ನತ ಶಿಕ್ಷಣ ಹೊಂದಿದ್ದರು ಕೃಷಿಯೇ ಮುಖ್ಯ ಆಯ್ಕೆಯಾಗಿರಲು ಕಾರಣವನ್ನು ಸವಿವರವಾಗಿ ತಿಳಿಸುವುದರ ಜೊತೆಗೆ ತಾವು ಬೆಳೆದ ಬೆಳೆಗಳ ವೀಕ್ಷಣೆ ರಬ್ಬರ್, ಹೈನುಗಾರಿಕೆ ಇತ್ಯಾದಿಗಳ ವಿವರಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ದಾಮೋದರ್ ಕಣಜಾಲು ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ಕೃಷಿಯು ಕೊನೆಯ ಆಯ್ಕೆಯಾಗಿ ಉಳಿದಿದೆ. ಆದರೆ ಈ ಕೃಷಿ ಕ್ಷೇತ್ರ ದರ್ಶನದಿಂದ ಅನೇಕ ವಿದ್ಯಾರ್ಥಿಗಳಲ್ಲಿ ಕೃಷಿಯ ಕಡೆ ಒಲವು ಮೂಡಬಹುದೆಂಬ ಆಶಯ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿವಿಧ ಆಯಾಮಗಳಲ್ಲಿ ಶಿಭಿರಾರ್ಥಿಗಳಿಗೆ ಕೃಷಿ ಮಾಹಿತಿ ನೀಡಿದ ಸಿರಿ ಕಡಮಜಲು ಕ್ಷೇತ್ರದ ದಂಪತಿಗಳಿಗೆ ಅಭಾರಿಯಾಗಿದ್ದೇವೆ ಎಂದರು.

ಉಪನ್ಯಾಸಕ ಡಾಕ್ಟರ್ ಕೆ ರಾಮಚಂದ್ರ, ಡಾ. ಸುಪ್ರಿಯ ಪಿ ಆರ್ ,ಯಶೋಧ ಎನ್, ರಶ್ಮಿತಾ ಕರ್ಕೇರ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಗಿರೀಶ್ ಸಿ ಆರ್ ಕಾರ್ಯಕ್ರಮವನ್ನು ಸಂಘಟಿಸಿದರು.55 ಶಿಬಿರಾರ್ಥಿಗಳು ಕಾರ್ಯಕ್ರಮವನ್ನು ಸದುಪಯೋಗಿಸಿಕೊಂಡರು.ಶಿಬಿರಾರ್ಥಿಗಳಾದ ದೀಪಿಕಾ ಸ್ವಾಗತಿಸಿ, ನಿರೂಪಿಸಿದರು.ಜನನಿ ವಂದಿಸಿದರು.

LEAVE A REPLY

Please enter your comment!
Please enter your name here