ನೆಲ್ಯಾಡಿ: ನೆಲ್ಯಾಡಿ ಪರಿಸರದ ಸೈಂಟ್ ಮೇರಿಸ್ ಚರ್ಚ್ ಆರ್ಲ, ಸೈಂಟ್ ಅಲ್ಫೋನ್ಸಾ ಚರ್ಚ್, ಸೈಂಟ್ ಸ್ಟೀಫನ್ಸ್ ಚರ್ಚ್, ಲಿಟಲ್ ಫ್ಲವರ್ ಚರ್ಚ್ ಇಚ್ಲಂಪಾಡಿ ಇದರ ಆಶ್ರಯದಲ್ಲಿ ಈ ವರ್ಷದ ಶುಭ ಶುಕ್ರವಾರ ಆಚರಣೆಯನ್ನು ಮಾ.29ರಂದು ನೆಲ್ಯಾಡಿಯಲ್ಲಿ ಆಚರಿಸಲಾಯಿತು.
ಲೋಕ ಕಲ್ಯಾಣಕ್ಕಾಗಿ ಪಾಪ ಕೂಪದಿಂದ ಮನುಜ ಕುಲವನ್ನು ರಕ್ಷಿಸಲು ಎಲ್ಲಾ ರೀತಿಯ ಗುಲಾಮ ಗಿರಿಯಿಂದ ಮಾನವ ವಂಶವನ್ನು ರಕ್ಷಿಸಿ ವಿಶ್ವ ಭಾತೃತ್ವದ ಸಮಾಜ ನಿರ್ಮಾಣಕ್ಕಾಗಿ ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತರು ಶಿಲುಭೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಇದರ ಸ್ಮರಣೆಯೇ ಶುಭ ಶುಕ್ರವಾರ. ಎಲ್ಲಾ ಚರ್ಚ್ಗಳಲ್ಲಿ ಬೆಳಿಗ್ಗೆಯಿಂದಲೇ ಪೂಜಾ ವಿಧಿಗಳು ನಡೆದು ನೂರಾರು ಮಂದಿ ಭಾಗವಹಿಸಿದರು. ಪಾಸ್ಕ ಗುರುವಾರದಂದು ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು ತೊಳೆದು ಪವಿತ್ರ ಪರಮ ಪ್ರಸಾದದ ಸ್ಥಾಪನೆಯ ಸ್ಮರಣೆಯನ್ನು ಮಾಡಲಾಯಿತು. ನೆಲ್ಯಾಡಿ ಅಲ್ಫೋನ್ಸಾ ಚರ್ಚ್ನಲ್ಲಿ ಪೂಜಾ ವಿಧಿಗಳಿಗೆ ಫಾ. ಶಾಜಿ ಮ್ಯಾಥ್ಯು ನೇತೃತ್ವ ವಹಿಸಿದ್ದರು.