ಗ್ರೆಸ್ ಯಾವತ್ತಿಗೂ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುತ್ತದೆ -ಪದ್ಮರಾಜ್ ಆರ್
ಪುತ್ತೂರು:ಸಂಸತ್ ಸದಸ್ಯರಾಗಿ ಹೋಗುವವರಿಗೆ ಎಲ್ಲಾ ಭಾಷೆಗಳು ತಿಳಿದಿರಬೇಕು.ಹಾಗಾಗಿ ಇದಕ್ಕೆ ತಕ್ಕಂತೆ ಪದ್ಮರಾಜ್ ವಿದ್ಯಾವಂತರು.ಪ್ರತೀ ಕ್ಷೇತ್ರದಲ್ಲಿ 25 ಸಾವಿರ ಮತಗಳ ಲೀಡ್‌ಗೆ ತಯಾರಿ ನಡೆಸಲಾಗುತ್ತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಪುತ್ತೂರಿನಲ್ಲಿ ಕಾಂಗ್ರೆಸ್‌ನ ದ.ಕ.ಲೋಕಸಭಾ ಚುನಾವಣಾ ಕಚೇರಿ ಉದ್ಘಾಟಿಸಿ ಆ ಬಳಿಕ ಚುನಾವಣಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಬೂತ್ ಬೂತ್‌ನ ಪ್ರತೀ ಮನೆಗೂ ಭೇಟಿ ನೀಡುವ ಕೆಲಸವನ್ನು ಮಾಡುತ್ತೇವೆ.ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು 98% ಮನೆ ಮನೆಗೂ ತಲುಪಿವೆ.ಪದ್ಮರಾಜ್ ಅವರು ಓರ್ವ ವಿದ್ಯಾವಂತ, ಬಡವರ ಬಗ್ಗೆ ಕಾಳಜಿ ಉಳ್ಳವರು. ಸಂಸತ್ ಸದಸ್ಯರಾಗಿ ದಿಲ್ಲಿಗೆ ಹೋಗುವವರಿಗೆ ಎಲ್ಲಾ ಭಾಷೆಗಳ ಜ್ಞಾನ ಬೇಕು. ಓರ್ವ ಸಮರ್ಥ ಅಭ್ಯರ್ಥಿಯನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದೇವೆ. ಎಪ್ರಿಲ್ 15ರಂದು ಪುತ್ತೂರಿನಲ್ಲಿ ಒಂದು ಬೃಹತ್ ಸಮಾವೇಶ ನಡೆಯಲಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮಾತನಾಡಿ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಮೂರು ಬಾಗಿಲಾಗಿದೆ. ಚುನಾವಣೆಗೆ ಎಲ್ಲೆಡೆ ಕಾರ್ಯಕರ್ತರನ್ನು ನಾವು ಸಜ್ಜುಗೊಳಿಸಿ, ಪುತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಆರಂಭಿಸಿದ್ದೇವೆ.ಎ.3ರಂದು ನಾನು ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಲಿದ್ದೇನೆ. ಹಿಂದೆ 40 ವರ್ಷ ಕಾಂಗ್ರೆಸ್ ಸಂಸದರು ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಜಿಲ್ಲೆಯಲ್ಲಿ ಆಗಿದೆ.33 ವರ್ಷಗಳಿಂದ ಇಲ್ಲಿ ಗೆದ್ದಿರುವ ಬಿಜೆಪಿ ಸಂಸದರು ಏನೂ ಮಾಡಿಲ್ಲ,ಇದು ದೇಶಪ್ರೇಮಿ-ದೇಶದ್ರೋಹಿಗಳ ಚುನಾವಣೆ ಎಂದು ಹೇಳುತ್ತಿದ್ದಾರೆ.ಆ ಪರಮಾತ್ಮ, ಆ ರಾಮದೇವರು ಅವರಿಗೆಲ್ಲಾ ಒಳ್ಳೆಯ ಬುದ್ಧಿ ನೀಡಲಿ. ದ.ಕ. ಜಿಲ್ಲೆ ಪರಸ್ಪರ ಸೌಹಾರ್ದ ಸಾಮರಸ್ಯದಿಂದ ಬೆಳೆದುಬಂದಿರುವ ಜಿಲ್ಲೆ .ಕಾಂಗ್ರೆಸ್ ಯಾವತ್ತಿಗೂ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರೀಶ್,ಕಾವು ಹೇಮನಾಥ ಶೆಟ್ಟಿ , ಪ್ರಮುಖರು ಉಪಸ್ಥಿತರಿದ್ದರು.