ಉಪ್ಪಿನಂಗಡಿ: ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಯ 4ರಿಂದ 7ನೇ ತರಗತಿಯ ಮಕ್ಕಳಿಂದ ಬೆಂಕಿ ಇಲ್ಲದೆ ಅಡುಗೆ ತಯಾರಿ ಎ.6ರಂದು ಶಾಲೆಯಲ್ಲಿ ನಡೆಯಿತು.
ಶಾಲೆಯ ವಿದ್ಯಾರ್ಥಿಗಳು ಸುಮಾರು ೨೫ ಬಗೆಯ ವಿವಿಧ ಖಾದ್ಯಗಳನ್ನು ಬೆಂಕಿಯ ಉಪಯೋಗವಿಲ್ಲದೇ ತಯಾರಿಸುವ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಶಾಲಾ ಮುಖ್ಯಗುರು ವಿದ್ಯಾ ಅವರು ಸಂದರ್ಭೋಚಿತವಾಗಿ ಮಾತನಾಡಿ ಮಕ್ಕಳ ಕೌಶಲ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಶಿಕ್ಷಕಿಯರಾದ ಮಾಲತಿ, ಪವಿತ್ರ, ಚಿತ್ರಾವತಿ, ಪ್ರಭಾ, ಅಕ್ಷರದಾಸೋಹ ಸಿಬ್ಬಂದಿಗಳಾದ ಗೀತಾ, ಗೋಪಿಕಾ ಅವರು ವಿವಿಧ ರೀತಿಯಲ್ಲಿ ಸಹಕರಿಸಿದರು.