ವಾಹಿನಿ ಕಲಾ ಸಂಘದ ವಾಹಿನಿ ಸಾಹಿತ್ಯ ಸಂಭ್ರಮ – ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿ

0

ಪುತ್ತೂರು: ವಾಹಿನ ಕಲಾ ಸಂಘ ದರ್ಬೆ ಇದರ ವಾಹಿನ ಸಾಹಿತ್ಯ ಸಂಭ್ರಮ-2024, ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿಗಳು ಏ.11ರಂದು ಮುಕ್ರಂಪಾಡಿ ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಚಂದ್ರಶೇಖರ ಏತಡ್ಕ ಮಾತನಾಡಿ, ಭಾವನೆಗಳ ಒಂದು ಲೋಕವೇ ಸಾಹಿತ್ಯ. ಇಂದಿನ ಒತ್ತಡದ ಜೀವನದಲ್ಲಿ ಸಾಹಿತ್ಯವನ್ನು ಪ್ರಸ್ತುತ ಪಡಿಸುವುದು ಸೂಕ್ತ. ಮೊಬೈಲ್ ವಾಟ್ಸಪ್ ಗ್ರೂಪ್ ಗಳು ಬರವಣಿಗೆಯ ಪ್ರಯೋಗ ಶಾಲೆಯಾಗಿದ್ದು ಸಾಹಿತಿಗಳ ಉಗಮಕ್ಕೆ ಉತ್ತಮ ವೇದಿಕೆಯಾಗಿದೆ. ನಮ್ಮ ಗ್ರೂಪ್ ಗಳಲ್ಲಿ ಸಾಹಿತಸಾಹಿತ್ಯ ದಲ್ಲಿ ಸಂಭಾಷಣೆ ನಡೆಯುತ್ತಿದೆ. ಅಂತರ್ಗತವಾಗಿ ನೆಲೆಗೊಂಡ ಸಾಹಿತ್ಯ ಹೊರಹೊಮ್ಮಿ ಪ್ರಕಟಗೊಳ್ಳುವ ವಿಧಾನಕ್ಕೆ ಮೂರೂ ಅಮೂಲ್ಯ ಪುಸ್ತಕಗಳನ್ನು ಒಟ್ಟಾಗಿ ಲೋಕಾರ್ಪಣೆ ಮಾಡಿದ ಕವಯತ್ರಿ ಭಾರತಿ ಕೊಲ್ಲರಮಜಲು ಉತ್ತಮ ಉದಾಹರಣೆ ಎಂದರು.

ಕೃತಿ ಬಿಡುಗಡೆ ಮಾಡಿದ ವಿಶ್ರಾಂತ ಉಪನ್ಯಾಸಕರು, ಹಿರಿಯ ಸಾಹಿತಿಗಳಾಗಿರುವ ಪ್ರೋ.ವಿ.ಬಿ ಅರ್ತಿಕಜೆ ಮಾತನಾಡಿ, ಆರು ರೂಪದ ಷಟ್ಪದಿಗಳಿವೆ. ಅವುಗಳು ಶರ ಕುಸುಮಗಳಿಂದ ಕೂಡಿರುತ್ತದೆ. ಷಟ್ಪದಿಗಳಿಗೆ ನಿರ್ಧಿಷ್ಟ ನಿಯಮಗಳಿದ್ದು ಅದರ ರಚನೆ ಸುಲಭವಲ್ಲ. ಸಾಗರದಲ್ಲಿ ಮುತ್ತು ರತ್ನ ಕಲ್ಲುಗಳಿದ್ದು ಅವುಗಳನ್ನು ಆರಿಸಿ ಭಟ್ಟಿ ಇಳಿಸಿದಂತೆ ಭಾರತಿಯವರು ಷಟ್ಪದಿ ರೂಪಕ್ಕೆ ತಂದಿದ್ದಾರೆ. ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸಗಳನ್ನು ಎಲ್ಲರೂ ರೂಡಿಸಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಬೆಳೆಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ವಾಹಿನಿ ಕಲಾ ಸಂಘವು ಉತ್ತಮ ಸೇವೆ ಸಲ್ಲಿಸುತ್ತಿದೆ. ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿಯನ್ನು ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ವಾಹಿನಿ ಕಲಾ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೂಡಬಿದರೆ ಆಳ್ವಾಸ್ ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕ, ಸಾಹಿತಿಗಳಾಗಿರುವ ರಾಮಪ್ರಸಾದ್ ಕಾಂಚೋಡು ಮಾತನಾಡಿ, ಸಮಾಜದಲ್ಲಿರುವ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸುವುದು ಅರ್ಥ ಪೂರ್ಣ. ಕನ್ನಡ ಸಾಹಿತ್ಯ ಬೆಳೆಯಲು ವಾಹಿನಿ ಕಲಾ ಸಂಘದ ಇಂತಹ ಕಾರ್ಯಕ್ರಮಗಳು ಸಹಾಯಕ ಎಂದರು.
ಹಿರಿಯ ಕವಿ ಗೋಪಾಲಕೃಷ್ಣ ಭಟ್ ಮನವಳಿಕೆಯವರು ಭಾವ ಭಾರತಿ, ಹಿರಿಯ ಸಾಹಿತಿ ಹರಿನರಸಿಂಹ ಉಪಾಧ್ಯಾಯ ಬೆಂಗಳೂರು-ಅಂತಃಸತ್ವ, ರಾಧಾಕೃಷ್ಣ ಉಳಿಯತ್ತಡ್ಕ-ವರ್ಣಲೋಕ, ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಎಸ್.ಕೆ ಗೋಪಾಲಕೃಷ್ಣ ಭಟ್ ಮನೋವಾರಿದಿ ಕೃತಿಗಳ ಪರಿಚಯ ಮಾಡಿದರು.
ಸನ್ಮಾನಿತರ ಪರವಾಗಿ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿದರು.

ಬಿಡುಗಡೆಗೊಂಡ ಕೃತಿಗಳು:
ಕಾರ್ಯಕ್ರಮದಲ್ಲಿ ಹಿರಿಯ ಕವಯತ್ರಿ ಭಾರತಿ ಕೊಲ್ಲರಮಜಲುರವರ ಭಾವ ಭಾರತಿ-ಭಾವಗೀತೆ, ಮನೋವಾರಿಧಿ-ಷಡ್ಪದಿಗಳು, ಅಂತಃಸತ್ತ್ವ-ಮುಕ್ತಕಗಳು, ವಿಶ್ರಾಂತ ಚಿತ್ರಕಲಾ ಶಿಕ್ಷಕ ಬಾಲ ಮಧುರಕಾನನರವರ ವರ್ಣಲೋಕ ಕೃತಿಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಸನ್ಮಾನ:
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸುಬ್ರಾಯ ಭಟ್, ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಸಾಹಿತ್ಯ ಕ್ಷೇತ್ರದಲ್ಲಿ ಸತ್ಯವತಿ ಕೊಳಚಪ್ಪು, ರಾಧಾಕೃಷ್ಣ ಉಳಿಯತ್ತಡ್ಕ, ಅಧ್ಯಾಪನ, ಸಾಹಿತ್ಯ ಕ್ಷೇತ್ರದಲ್ಲಿ ಡಾ|ಮಹೇಶ್ವರಿ ಯು, ಸಾಹಿತ್ಯ ಸಂಘಟನೆ ಕ್ಷೇತ್ರದಲ್ಲಿ ಹಮೀದಾ ಬೇಗಂ, ಆಶಾ ಬೆಳ್ಳಾರೆ, ಅಧ್ಯಾಪನ, ಸಾಹಿತ್ಯ, ಜ್ಯೋತಿಷ್ಯ ಕ್ಷೇತ್ರದಲ್ಲಿ ಲಕ್ಷ್ಮೀನಾರಾಯಣ ಭಟ್ ನೆರಿಯ, ಉದಯೋನ್ಮುಖ ಸಾಹಿತ್ಯ ಪ್ರತಿಭೆ ರಮ್ಯಾ ನೆಕ್ಕರೆಕಾಡು, ಯಕ್ಷಗಾನ ಆನಂದ ಭಟ್ ಮದಂಗಲ್ಲು, ಸಾಹಿತ್ಯ ಕ್ಷೇತ್ರದಲ್ಲಿ ಪ್ರಸನ್ನಾ ವಿ. ಚೆಕ್ಕೆಮನೆಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅನೂಷ ಕೊಲ್ಲರಮಜಲು ಆಶಯಗೀತೆ ಹಾಡಿದರು.ವಾಹಿನಿ ಕಲಾ ಸಂಘದ ರಾಜ್ಯಾಧ್ಯಕ್ಷ ಮಧುರಕಾನನ ಗಣಪತಿ ಭಟ್ಟ ಸ್ವಾಗತಿಸಿದರು. ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ| ವಿಜಯ ಸರಸ್ವತಿ ಕಜೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಕುಲಾಲ್ ಮಿತ್ತೂರು ವಂದಿಸಿದರು.

ಕವಿಗೋಷ್ಠಿ:
ಅಪರಾಹ್ನ ನಡೆದ ಕವಿಗೋಷ್ಠಿಯಲ್ಲಿ ಕವಯತ್ರಿ, ಸುಳ್ಯ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ಅಶ್ವಿನಿ ಕೋಡಿಬೈಲ್ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಆಶಾ ಮಯ್ಯ ಕುಂಜೂರು ಪಂಜ ಚಾಲನೆ ನೀಡಿದರು. ಎಸ್.ಕೆ ಗೋಪಾಲಕೃಷ್ಣ ಭಟ್, ಅಶೋಕ ಎನ್. ಕಡೆಶಿವಾಲಯ, ಉದಯರವಿ ಕೊಂಬ್ರಾಜೆ, ಗೋಪಾಲಕೃಷ್ಣ ಭಟ್ ಮನವಳಿಕೆ, ಸಮ್ಯಕ್ತ್ ಜೈನ್ ಕಡಬ, ಬಿ.ಸತ್ಯವತಿ ಭಟ್ ಕೊಳಚಪ್ಪು, ರಿತೇಶ್ ಕಿರಣ್ ಕಾಟುಕುಕ್ಕೆ, ಅನುರಾಧ ಶಿವಪ್ರಕಾಶ್ ಉಬರಡ್ಕ, ಸಾನು ಉಬರಡ್ಕ, ಕೃಷ್ಣ ಪ್ರಸಾದ ಭಟ್ ಕಡಬ, ಪ್ರಮಿಳಾ ಚುಳ್ಳಿಕ್ಕಾನ, ಗೀತಾ ರಾವ್ ಕೆದಿಲ, ಪ್ರಮೀಳಾ ರಾಜ್ ಬಂಟ್ವಾಳ, ರಶ್ಮಿತಾ ಸುರೇಶ್ ಬಂಡ್ವಾಳ, ಅಶ್ವಥ್ಥ್ ಬರಿಮಾರು, ಭವ್ಯಜ್ಯೋತಿ ವಿಟ್ಲ, ಶಾಂತಾ ಪುತ್ತೂರು, ಸಂಧ್ಯಾ ಗೀತಾ ಬಾಯಾರು, ನರಸಿಂಹ ಭಟ್ ಕಟ್ಟದಮೂಲೆ, ಶಂಕರಿ ಶರ್ಮ ಪುತ್ತೂರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ರಶ್ಮಿತಾ ಸುರೇಶ್ ಸ್ವಾಗತಿಸಿದರು.
ಅನುರಾಧ ಶಿವಪ್ರಕಾಶ್ ಉಬರಡ್ಕ, ಶಂಕರಿ ಶರ್ಮ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ಚುಳ್ಳಿಕ್ಕಾನ ವಂದಿಸಿದರು.

LEAVE A REPLY

Please enter your comment!
Please enter your name here