ಕಾಂಗ್ರೆಸ್ ಪ್ರತೀ ಕುಟುಂಬಕ್ಕೂ ಶಕ್ತಿ ನೀಡಿದೆ: ಅಶೋಕ್ ಕುಮಾರ್ ರೈ
ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಪ್ರತಿಯೊಂದು ಕುಟುಂಬಕ್ಕೂ ಶಕ್ತಿ ಬಂದಿದ್ದು, ಜನ ಕಾಂಗ್ರೆಸ್ ಬಗ್ಗೆ ಒಲವು ತೋರುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಹಾರಾಡಿ ವಾಣಿಶ್ರೀಧರ್ ರವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಯಾವ ಸರಕಾರವೂ ನೀಡದ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ನೀಡಿದೆ. ಕೇಂದ್ರದ ಬಿಜೆಪಿ ಸರಕಾರದ ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದ ಕುಟುಂಬಗಳು ಗ್ಯಾರಂಟಿಯಿಂದ ಬದುಕು ಕಟ್ಟಿಕೊಳ್ಳುವಂತಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಇಲ್ಲದೇ ಇರುತ್ತಿದ್ದರೆ ಜನತೆ ಹಸಿವಿನಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ವಿಚಾರವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ಬಿಜೆಪಿಯಿಂದ ಧರ್ಮ ರಾಜಕೀಯ
ಬಿಜೆಪಿ ಏನೂ ಅಭಿವೃದ್ದಿ ಕೆಲಸ ಮಾಡಿಲ್ಲ, ಅವರು ಜನತೆಯ ಮುಂದೆ ಹೇಳಿಕೊಳ್ಳುವಂತದ್ದು ಏನು ಇಲ್ಲ ಈ ಕಾರಣಕ್ಕೆ ಜನರ ಭಾವನೆಯನ್ನು ಕೆರಳಿಸಲು ಧರ್ಮದ ವಿಚಾರವನ್ನು ಮುಂದಿಟ್ಟು ಧರ್ಮ ರಾಜಕಾರಣ ಮಾಡುತ್ತಿದೆ. ಬಿಜೆಪಿಯ ನಕಲಿ ಹಿಂದುತ್ವ ವೋಟಿಗಾಗಿ ಮಾಡುವ ನಾಟಕವಾಗಿದೆ ಎಂದು ಹೇಳಿದರು.
ಬಿಜೆಪಿ ಜೊತೆ ಚಾಲೆಂಜ್ ಗೆ ಸಿದ್ದ
ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟರಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ್ತು ನಾನು ಧರ್ಮದ ವಿಚಾರದಲ್ಲಿ ಚಾಲೆಂಜ್ ಹಾಕುತ್ತಿದ್ದೇವೆ ಅದನ್ನು ಸ್ವೀಕರಿಸಲು ಅವರು ಸಿದ್ದರಿದ್ದಾರ? ನಾನು ಮತ್ತು ಪದ್ಮರಾಜ್ ಅನೇಕ ದೈವ, ದೇವಸ್ಥಾನಗಳ ಬ್ರಹ್ಮಕಲಶ ಮಾಡಿದ್ದೇವೆ, ಚೌಟರು ಹಿಂದೂ ಧರ್ಮಕ್ಕಾಗಿ ಏನು ಮಾಡಿದ್ದಾರೆ ಎಂಬುದನ್ನು ತಿಳಿಸಿ ಎಂದು ಚಾಲೆಂಜ್ ಹಾಕಿದ್ದಾರೆ.
ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಉಸ್ತುವಾರಿಗಳಾದ ಮೌರಿಶ್ ಮಸ್ಕರೇನಸ್, ಮುರಳೀದ್ ರೈ ಮಟಂತಬೆಟ್ಟ, ಶಕೂರ್ ಹಾಜಿ, ವಾಣಿ ಶ್ರೀಧರ್, ಬೂತ್ ಅಧ್ಯಕ್ಷ ದಿನೇಶ್ ಪಿ ವಿ, ಇಸ್ಮಾಯಿಲ್, ಅಂಗಾರ, ರೋಶನ್ ಭಂಡಾರಿ, ಆಸಿಫ್, ಅಬ್ದುಲ್ ರಝಾಕ್ ಪಡೀಲ್, ವಲೇರಿಯನ್ ಲೋಬೋ, ಶ್ರೀಧರ ಭಂಡಾರಿ, ಲ್ಯಾನ್ಸಿ ಮಸ್ಕರೇನಸ್, ಅಬ್ದುಲ್ ಗಫೂರ್, ರಾಜೀವಿ, ಹೇಮ, ಸುಶ್ಮಾ, ಸುಜಾತಾ, ಆರ್ ಸೇಟ್, ಶಬರೀಶ್ ಮೊದಲಾದವರು ಉಪಸ್ಥಿತರಿದ್ದರು.