
ಪುತ್ತೂರು: ಎ.10ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ಧ ಪುತ್ತೂರಿನ ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.17ರಂದು ಬ್ರಹ್ಮರಥೋತ್ಸವ ಬಳಿಕ ಎ.18ರಂದು ಶ್ರೀ ದೇವರ ಅವಭೃತ ಸವಾರಿ ಪೂರ್ಣಗೊಂಡು ಎ.19ರ ಬೆಳಗ್ಗಿನ ಜಾವ ಕುಮಾರಧಾರ ಹೊಳೆಯಲ್ಲಿ ಅವಭೃತ ಸ್ನಾನ ಸಂಪನ್ನಗೊಂಡಿತ್ತು.