ಪುತ್ತೂರು: ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ನಡೆದ ʼನನ್ನ ಬೂತ್ ನಾನು ಅಭ್ಯರ್ಥಿʼ ಕಾರ್ಯಕ್ರಮದನ್ವಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬೂತ್ ನಂ. 137, 138ರಲ್ಲಿ ಪಕ್ಷದ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರವಾಗಿ ಕೆಪಿಸಿಸಿ ಸಂಯೋಜಕರು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮತಯಾಚಿಸಿದರು. ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ಇಸ್ಮಾಯಿಲ್, ಪುತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅನ್ವರ್ ಕಾಸಿಂ, ರೆಹಮಾನ್ ಗಾಲ್ಬರ್, ಮೋನಪ್ಪ ಕೆರೆಮೂಲೆ, ಮುನ್ನ ಸಾಲ್ಮರ, ರೇಶ್ಮಾ, ಸೋಬಿನ್, ನಗರಸಭಾ ಸದಸ್ಯ ರಾಬಿನ್ ಸಾಲ್ಮರ ಉಪಸ್ಥಿತರಿದ್ದರು.
