ಮತಗಟ್ಟೆಗಳಲ್ಲಿ ನಿಶಾನೆ ಅಳವಡಿಕೆ

0

ಪುತ್ತೂರು: ಮತಗಟ್ಟೆಯ 200ಮೀಟರ್‌ ಪ್ರದೇಶದ ಒಳಗೆ ಅಭ್ಯರ್ಥಿಗಳ ಚುನಾವಣಾ ಬೂತ್‌ ಸ್ತಾಪಿಸಲು ಅವಕಾಶವಿರುವುದಿಲ್ಲ. ಮತ್ತು ಚುನಾವಣಾ ಸಂಬಂಧಿಸಿದ ಪ್ರಚಾರ ಅಥವಾ ಚಟುವಟಿಕೆಗಳಿಗೆ ಅವಾಕಾಶವಿರುವುದಿಲ್ಲ. ಮತದಾನದ ದಿನದಂದು ಮತಗಟ್ಟೆಯೊಳಗೆ ಮೊಬೈಲ್‌ ಫೋನ್‌ ಗಳನ್ನು ಬಳಸುವಂತಿಲ್ಲ ಮತ್ತು ಕೊಂಡೊಯ್ಯುವಂತಿಲ್ಲ. ಮತಗಟ್ಟೆಯ 100ಮೀಟರ್‌ ಪ್ರದೇಶದೊಳಗೆ ಯಾವುದೇ ಚುನಾವಣಾ ಪ್ರಚಾರದ ಪೋಸ್ಟರ್‌, ಬ್ಯಾನರ್‌ ಇರುವಂತಿಲ್ಲ.ಹಾಗಾಗಿ ಮತಗಟ್ಟೆಯ ಸೀಮಿತ ಪ್ರದೇಶವನ್ನು ಗುರುತಿಸಲು ಅಲ್ಲಿ ಕೆಂಪು ನಿಶಾನೆ ಹಾಕಲಾಗುತ್ತದೆ. ಅದರಂತೆ ಪುತ್ತೂರಿನ ವಿಧಾನಸಭೆಯ ಅನೇಕ ಮತಗಟ್ಟೆಗಳಲ್ಲಿ ಈ ನಿಶಾನೆ ಹಾಕಲಾಗಿದೆ

LEAVE A REPLY

Please enter your comment!
Please enter your name here